ಅಚ್ಚರಿ ರೀತಿಯಲ್ಲಿ ಪತ್ತೆಯಾಯ್ತು ಮೃತ ವ್ಯಕ್ತಿಯ ಫೋಟೋ 09-01-2021 6:22AM IST / No Comments / Posted In: Latest News, International ಜಪಾನ್ನ ವ್ಯಕ್ತಿಯೊಬ್ಬರು ಗೂಗಲ್ ಅರ್ಥ್ನಲ್ಲಿ 7 ವರ್ಷಗಳ ಹಿಂದೆ ನಿಧನರಾದ ತಮ್ಮ ತಂದೆಯ ಚಿತ್ರವನ್ನ ಕಂಡುಕೊಂಡಿದ್ದಾರೆ. ತಮ್ಮ ಈ ಆವಿಷ್ಕಾರದ ಬಗ್ಗೆ ಟ್ವಿಟರ್ನಲ್ಲಿ ಬರೆದುಕೊಂಡಿದ್ದು ಈ ಟ್ವೀಟ್ ಇದೀಗ ವ್ಯಾಪಕವಾಗಿ ಶೇರ್ ಆಗುತ್ತಿದೆ. ಕೊರೊನಾ ವೈರಸ್ ನಿಬಂಧನೆಗಳಿಂದಾಗಿ ಸಮಯ ಕಳೆಯೋದು ಕಷ್ಟವಾದ ಬಳಿಕ ಜಪಾನ್ನ ಈ ವ್ಯಕ್ತಿ ಗೂಗಲ್ನಲ್ಲಿ ತನ್ನ ಹೆತ್ತವರ ಮನೆಯನ್ನ ಹುಡುಕೋಕೆ ನಿರ್ಧರಿಸಿದರು. ಗೂಗಲ್ನಲ್ಲಿ ತನ್ನ ದಿವಂಗತ ತಂದೆ ರಸ್ತೆಯ ಪಕ್ಕದಲ್ಲಿ ನಿಂತು ತನ್ನ ತಾಯಿಯ ಕಡೆ ನೋಡುತ್ತಿರುವ ಫೋಟೋ ಕಂಡು ಆಶ್ಚರ್ಯ ಚಕಿತರಾದ್ರು. ಏಳು ವರ್ಷಗಳ ಹಿಂದೆ ನಿಧನರಾಗಿದ್ದ ನನ್ನ ತಂದೆಯನ್ನು ನಾನು ನೋಡಿದೆ ಎಂದು ಶೀರ್ಷಿಕೆ ನೀಡಿರುವ ಈ ವ್ಯಕ್ತಿ ಜಪಾನ್ ಬೀದಿಯ 2 ಫೋಟೋಗಳನ್ನ ಶೇರ್ ಮಾಡಿದ್ದಾರೆ. ನನ್ನ ತಂದೆ ತಾಯಿಯನ್ನ ಕಾಯುತ್ತಿರಬೇಕು. ನನ್ನ ತಂದೆ ಶಾಂತ ವ್ಯಕ್ತಿ ಆದರೆ ತುಂಬಾನೇ ಕರುಣಾಳು ಎಂದು ಬರೆದಿದ್ದಾರೆ. ಅಲ್ಲದೇ ಗೂಗಲ್ ಬಳಿ ದಯಮಾಡಿ ಈ ರಸ್ತೆಯ ಚಿತ್ರವನ್ನ ಬದಲಾಯಿಸಬೇಡಿ ಎಂದು ಮನವಿ ಮಾಡಿದ್ದಾರೆ. ಈ ಟ್ವೀಟ್ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. コロナでやる事ないからGoogleEarthで実家見に行ったら7年前に死んだ親父が写ってた。その先に人が居たから見に行ったら母ちゃんだった。一服しながら奥さんの帰りを待ってたんだな。無口だけど優しい親父だった。このままこの場所の写真更新しないで欲しいな。 pic.twitter.com/PXxBICAxmz — タムチンキ (@TeacherUfo) January 4, 2021