ಆತನ ಹೆಸರು ಸ್ಯಾಮ್ ಡಾರ್ಲಾಸ್ಟನ್. ಆತ ತನ್ನ ಮನೆ ಸಮೀಪದ ಟೆಸ್ಕೋ ಸೂಪರ್ ಮಾರ್ಕೆಟ್ ಗೆ ಭೇಟಿ ಕೊಡುತ್ತಾನೆ. ಹಾಗೆಯೇ ತರಕಾರಿಗಳನ್ನು ಖರೀದಿ ಮಾಡುತ್ತಾನೆ. ಅಲ್ಲಿ ಖರೀದಿಸಿದ ಕೋಸುಗಡ್ಡೆಯಲ್ಲಿ ಮರಿ ಹುಳುಗಳು ಪತ್ತೆಯಾಗುತ್ತವೆ. ಇದಕ್ಕಾಗಿ ಆತ ಹೆಚ್ಚಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅದನ್ನು ತನ್ನ ಮಕ್ಕಳ ಮಾದರಿಯಲ್ಲಿ ಸಾಕುತ್ತಾನೆ. ಕೊನೆಗೆ ಮರಿಗಳು ಏನಾದವು ಗೊತ್ತಾ..?
ಅವುಗಳನ್ನು ಗ್ಲಾಸ್ ವೊಂದರಲ್ಲಿ ಬೆಳೆಯಲು ಬಿಡುತ್ತಾನೆ. ಹೀಗೆ ಬೆಳೆಸಿ ಅದು ಚಿಟ್ಟೆಯಾಗಿ ಮಾರ್ಪಡುತ್ತದೆ. ಈ ಹುಳುಗಳು ಚಿಟ್ಟೆಯಾಗಿ ಬದಲಾಗುವ ಎಲ್ಲ ಬೆಳವಣಿಗೆಯ ಹಂತಗಳನ್ನು ಆತ ವಿಡಿಯೋ ಮಾಡಿ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾನೆ. ವಿಷಯ ಗೊತ್ತಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಸೂಪರ್ ಮಾರ್ಕೆಟ್ ನವರು ಆತನಿಗೆ ಅದಕ್ಕೆ ಮರುಪಾವತಿಯಾಗಿ ಹಣವನ್ನು ಕೊಡುತ್ತಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಯಾಮ್, ನಾನು ಸೂಪರ್ ಮಾರ್ಕೆಟ್ ನಿಂದ ಖರೀದಿಸಿಕೊಂಡು ಬಂದ ಕೋಸು ಗಡ್ಡೆಯಲ್ಲಿ ಹುಳಗಳು ಕಂಡವು. ಅವುಗಳಲ್ಲಿ ಒಂದು ನನಗೆ ಬಹಳ ಇಷ್ಟವಾಯಿತು. ಅದಕ್ಕೆ ನಾನು ಸೆಡ್ರಿಕ್ ಎಂದು ಹೆಸರಿಟ್ಟು ಸಾಕಿಕೊಂಡಿದ್ದೇನೆ ಎಂದು ಬರೆದುಕೊಂಡಿದ್ದಾನೆ.