ಬಸ್ಗಾಗಿ ಕಾಯುತ್ತಿದ್ದ ವ್ಯಕ್ತಿ ಅಚಾನಕ್ ಆಗಿ 12 ಅಡಿ ಆಳದ ಗುಂಡಿಗೆ ಬಿದ್ದ ಘಟನೆ ನ್ಯೂಯಾರ್ಕ್ನಲ್ಲಿ ವರದಿಯಾಗಿದೆ. ಈ ಆಘಾತಕಾರಿ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಬ್ರಾಂಕ್ಸ್ ಮೂಲದ ಲಿಯೋನಾರ್ಡ್ ಶೋಲ್ಡರ್ಸ್ ಸಿಂಕ್ಹೋಲ್ಗೆ ಬಿದ್ದ ವ್ಯಕ್ತಿ. ಇವರು ಸಿಂಕ್ಹೋಲ್ಗೆ ಬಿದ್ದಿದ್ದರಿಂದ ರಸ್ತೆಯಲ್ಲೇ ಇದ್ದ ಇತರೆ ಪಾದಚಾರಿಗಳಿಗೆ ಇವರ ಚೀರಾಟ ಕೇಳಲಿಲ್ಲ. ಇನ್ನು ಈ ವಿಚಾರವಾಗಿ ಪ್ರತಿಕ್ರಿಯಿಸಿದ ಲಿಯೋನಾರ್ಡ್ ತಾಯಿ, ನನ್ನ ಮಗ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಅವನು ಮನೆಯಲ್ಲಿ ಚೇತರಿಸಿಕೊಳ್ತಾ ಇದಾನೆ ಅಂತಾ ಹೇಳಿದ್ರು.
ಅಲ್ಲದೇ ಗುಂಡಿಯಲ್ಲಿ ಬಿದ್ದಿದ್ದ ಲಿಯೋನಾರ್ಡ್ ಸಹಾಯಕ್ಕಾಗಿ ಕೂಗಲು ಹೆದರಿಕೊಂಡಿದ್ದರಂತೆ. ಇದಕ್ಕೆ ಕಾರಣ ಅಲ್ಲಿದ್ದ ಇಲಿಗಳು. ಅಲ್ಲಿದ್ದ ಇಲಿಗಳು ನೋಡೋಕೆ ತುಂಬಾ ದೊಡ್ಡದಾಗಿದ್ವು. ನಾನು ಬಾಯಿ ಬಿಟ್ಟು ಕಿರುಚಿದ್ರೆ ಅವು ನನ್ನ ಬಾಯಿಯೊಳಕ್ಕೆ ಹೋಗಬಹುದೆಂದು ಹೆದರಿ ನಾನು ಸುಮ್ಮನಿದ್ದೆ ಅಂತಾ ಲಿಯೋನಾರ್ಡ್ ತನ್ನ ತಾಯಿ ಬಳಿ ಹೇಳಿಕೊಂಡಿದ್ದರಂತೆ.