ಇತ್ತೀಚಿನ ವರ್ಷಗಳಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾರಣಕ್ಕೆ ಆಹಾರ ಕ್ರಮದ ಮೇಲೆ ಹಿಡಿತ ಸಾಧಿಸಲು ಕಸರತ್ತು ನಡೆಸುವುದು ಸಾಮಾನ್ಯ ವಿಚಾರ. ಸಿಕ್ಸ್ ಪ್ಯಾಕ್, ಝೀರೋ ಸೈಜ್ಗೆ ಯುವಕ - ಯುವತಿಯರು ಹಾತೊರೆಯುತ್ತಾರೆ. ದೇಹದ ಅಂದಗೆಡಿಸುವ ಆಹಾರದಿಂದ ಸಾಧ್ಯವಾದಷ್ಟು ದೂರ ಇರಲು ಮಧ್ಯ ವಯಸ್ಕರರು ಪ್ರಯತ್ನ ನಡೆಸುತ್ತಾರೆ.
ಆದರೆ ಇಲ್ಲೊಬ್ಬ ಮಹಾಶಯ ಪ್ರತಿವಾರ ಬರೋಬ್ಬರಿ 6 ಕೆಜಿ ಚೀಸ್ ತಿನ್ನುತ್ತಾನೆ. ಹಾಗೆಂದು ಆತನ ಅಂಗಸೌಷ್ಟವ ಬದಲಾಗಿಲ್ಲ. ವರ್ಷ 52 ಆಗಿದ್ದರೂ 25 ವಯಸ್ಸಿನವನಂತೆ ಶೇಪ್ ಹೊಂದಿ ಫಿಟ್ ಅಂಡ್ ಫೈನ್ ಆಗಿ ಕಾಣಿಸಿಕೊಂಡು ಸುದ್ದಿಯಾಗಿದ್ದಾನೆ.
ವಿವಾದಕ್ಕೆ ಕಾರಣವಾಯ್ತು ಹಡಗಿನಲ್ಲಿ ಯುವತಿಯರು ಮಾಡಿದ ನೃತ್ಯ
ಇಂಗ್ಲೆಂಡ್ನ ಟಾನ್ಬ್ರಿಡ್ಜ್ನ 52 ವರ್ಷದ ಮಾರ್ಕ್ ಕಿಂಗ್, ತನ್ನ ಹೆಂಡತಿ ಟ್ರೇಸಿ ವಿಂಟರ್ ಪ್ರತಿದಿನ ಸಿದ್ಧಪಡಿಸಿಕೊಡುವ ಚೀಸ್ ಸಹಿತ ಸ್ಯಾಂಡ್ ವಿಚ್ ಮತ್ತು ಇತರೆ ಖಾದ್ಯ ತಿನ್ನುತ್ತಾನೆ. ಕಳೆದ 25 ವರ್ಷಗಳಲ್ಲಿ ಆತ 7,280 ಕಿಲೋಗ್ರಾಂಗಳಷ್ಟು ಚೀಸ್ ಸೇವಿಸಿದ್ದಾನಂತೆ.
ಪ್ರತಿದಿನವೂ ಚೀಸ್ ತಿನ್ನುತ್ತಿದ್ದರೂ ಮಾರ್ಕ್ ಆರೋಗ್ಯ ಉತ್ತಮ ಸ್ಥಿತಿಯಲ್ಲಿದೆ. ಎದೆಯುರಿ, ಅಜೀರ್ಣ, ಮಲಬದ್ಧತೆ, ಅಂತಹದ್ದೇನೂ ಇಲ್ಲವಂತೆ. ಆತನ ದೇಹಾರೋಗ್ಯದ ಬಗ್ಗೆ ಪತ್ನಿ ಕೂಡ ಮೆಚ್ಚುಗೆ ಅಭಿಪ್ರಾಯ ನೀಡಿದ್ದಾರೆ.