ಹಿಮಾವೃತಗೊಂಡ ವಾಹನಗಳನ್ನು ಚಲಿಸುವುದನ್ನು ಊಹಿಸಲೂ ತಾನೇ ಸಾಧ್ಯವೇ? ಇಲ್ಲೊಬ್ಬ ಭೂಪ ಮುಂಬದಿ ಹಾಗೂ ಹಿಂಬದಿಗಳ ವಿಂಡ್‌ಸ್ಕ್ರೀನ್‌ಗಳಿಂದ ಆವೃತವಾದ ಕಾರೊಂದನ್ನು ಚಾಲನೆ ಮಾಡಿದ್ದಾನೆ.
ಈತನನ್ನು ಅಪಾಯಕಾರಿ ಚಾಲನೆಯ ಆರೋಪದ ಮೇಲೆ ಪೊಲೀಸರು ಹಿಡಿದಿದ್ದಾರೆ. ಕಾರಿನ ಮುಂದಿನ ವಿಂಡ್‌ಶೀಲ್ಡ್ ಮೇಲೆ ಡ್ರೈವಿಂಗ್ ಮಾಡುವ ಜಾಗದ ಬಳಿ ಕಿರಿದಾದ ಒಂದಷ್ಟು ಜಾಗದಲ್ಲಿ ಹಿಮವನ್ನು ಕ್ಲಿಯರ್ ಮಾಡಲಾಗಿತ್ತು.
ಕೊರೆಯುವ ಚಳಿಯಲ್ಲಿ ಬೀದಿಯಲ್ಲೇ ಮಗುವಿಗೆ ಜನ್ಮ ನೀಡಿದ ನಿರಾಶ್ರಿತೆ..!
ಸ್ಕಾಟ್ಲೆಂಡ್‌ನ ಡನ್ಸಿನೇನ್ ಕೈಗಾರಿಕಾ ಪ್ರದೇಶದಲ್ಲಿ ನಡೆದ ಈ ಘಟನೆಯಲ್ಲಿ, ಗುರುವಾರ ಬೆಳಿಗ್ಗೆ 10 ಗಂಟೆಯ ವೇಳೆಗೆ ಈ ಚಾಲಕನನ್ನು ತಡೆ ಹಿಡಿದು ನಿಲ್ಲಿಸಲಾಗಿತ್ತು.
“ನಮ್ಮ ಅಧಿಕಾರಿಗಳು ಈ ಕಾರನ್ನು ನೋಡಿದಾಗ ನಂಬಿಕೆಯೇ ಬರಲಿಲ್ಲ. ಕಾರಿನ ಮೇಲಿನ ಹಿಮವನ್ನು ಕ್ಲಿಯರ್ ಮಾಡುವುದು ಕಷ್ಟವಾದರೂ ಸಹ ಇವೆಲ್ಲಾ ಬಹಳ ಅಗತ್ಯ. ಅಲಕ್ಷ್ಯದ ಪರಮಾವಧಿ ಇದು. ಪವಾಡಸದೃಶವಾಗಿ ಘಟನೆಯಲ್ಲಿ ಯಾರಿಗೂ ಏನೂ ಆಗಿಲ್ಲ,” ಎಂದು ಪೊಲೀಸರು ತಿಳಿಸಿದ್ದಾರೆ.