ಜರ್ಮನಿ ವ್ಯಕ್ತಿಯೊಬ್ಬರು ರೋಗ ಬಾರದಂತೆ ತಡೆಯಲು ಸ್ವಮೂತ್ರ ಪಾನ ವಿಧಾನ ಕಂಡುಕೊಂಡಿದ್ದಾರೆ. ಒಂದೆರಡಲ್ಲ ದಿನಕ್ಕೆ 3 ರಿಂದ 7 ಪಿಂಟ್ ವರೆಗೂ ತನ್ನದೇ ಮೂತ್ರ ಕುಡಿಯುತ್ತಾರೆ.
ಹ್ಯಾಂಬರ್ಗ್ ನ 26 ವರ್ಷದ ಕ್ರೀಡಾ ತರಬೇತುದಾರ ಜಾನ್ ಶ್ಚುನೆಮನ್ ಸ್ವಮೂತ್ರ ಪಾನ ಚಿಕಿತ್ಸೆ ಮಾಡಿಕೊಳ್ಳುತ್ತಿದ್ದಾರೆ. ಇದು ಮಾನಸಿಕ ಸ್ಥಿಮಿತ ಕಾಯ್ದುಕೊಂಡು ಡಿಪ್ರೆಶನ್ ನಿಂದ ಹೊರ ಬರಲೂ ಕಾರಣವಾಗುತ್ತದೆ ಎಂಬುದು ಅವರ ಅಭಿಪ್ರಾಯ.
2017 ರಿಂದ ಈ ಚಿಕಿತ್ಸೆ ಮಾಡಿಕೊಳ್ಳುತ್ತಿದ್ದು, ಚರ್ಮಕ್ಕೆ ಹಚ್ಚಿಕೊಳ್ಳುತ್ತಾರೆ. ಕಣ್ಣು ಮೂಗು, ಕಿವಿಗೆ ಮೂತ್ರ ಇಂಜಕ್ಟ್ ಮಾಡಿಕೊಳ್ಳಲು ಸಿರಿಂಜ್ ಬಳಸುತ್ತಾರೆ. “ಅಂತರ್ಜಾಲದದಲ್ಲಿ ಸ್ವಯಂಭೂ ಕಲ್ಪ ಎಂಬ ಚಿಕಿತ್ಸೆಯ ಮಾಹಿತಿಯನ್ನು ಪಡೆದು ಇದನ್ನು ಮಾಡಿಕೊಳ್ಳುತ್ತಿದ್ದೇನೆ. ಆರೋಗ್ಯವಾಗಿದ್ದೇನೆ. ಇದು ಹೆಚ್ಚು ಶಕ್ತಿ ನೀಡುತ್ತದೆ. ದಿನಕ್ಕೆ ನಾಲ್ಕು ತಾಸು ಮಾತ್ರ ನಿದ್ರೆ ಸಾಕಾಗುತ್ತದೆ” ಎಂದು ಜಾನ್ ಹೇಳಿದ್ದಾರೆ.