ಕೆಲವು ಆಹಾರ ಪ್ರಿಯರು ಹೇಗಿರುತ್ತಾರೆ ಎಂದರೆ, ತಿಂದಷ್ಟು ಸಾಕಾಗುತ್ತಿರುವುದಿಲ್ಲ. ಹೊಟೇಲ್‌ನಲ್ಲಿರುವ ಮೆನುವಿನಲ್ಲಿರುವುದೆಲ್ಲ ಖಾಲಿ ಮಾಡಿದರೂ ಇನ್ನಷ್ಟು ಬೇಕು ಎನ್ನುವವಿರುತ್ತಾರೆ.
ಈ ಪೀಠಿಕೆ ಹಾಕುತ್ತಿರುವುದೇಕೆ ಎನ್ನುವುದಕ್ಕೆ ಇಲ್ಲೊಂದು ಸುದ್ದಿ ಇದೆ ನೋಡಿ. 22 ವರ್ಷದ ಕೇಲ್ ಗಿಬ್ಸನ್
ಇತ್ತೀಚಿಗೆ ದೇಣಿಗೆ ಸಂಗ್ರಹಿಸಲು ತಿನ್ನುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಈ ಸ್ಪರ್ಧೆ ಫಾಸ್ಟ್‌ಫುಡ್ ತಿನ್ನುವವರಿಗೆ ಮೀಸಲಿತ್ತು. ಗಿಬ್ಸನ್ ಒಟ್ಟು ಎಂಟು ಬರ್ಗರ್, ನಾಲ್ಕು ಹಾಟ್‌ಡಾಗ್, ಎರಡು ಫ್ರೈಸ್, ಮೂರು ಸ್ಯಾಂಡ್‌ವಿಚ್ ಹಾಗೂ ಎರಡು ಬಟ್ಟರ್‌ಸ್ಕಾಚ್ ಸೇವಿಸಿದ್ದಾನೆ.
ಇದರಿಂದ ಸುಮಾರು 13 ಸಾವಿರ ಯೂರೋ ಸಂಗ್ರಹಿಸಿದ್ದು ಅದನ್ನು ದಾನ ಮಾಡಿದ್ದಾನೆ. ಇದಿಷ್ಟು ತಿನ್ನಲು ಆತ ತೆಗೆದಕೊಂಡಿದ್ದು ಕೇವಲ 62 ನಿಮಿಷವಂತೆ.