ಇಂಗ್ಲೆಂಡ್ ನ ಕೆಂಟ್ ನ ಮೇಸ್ತ್ರಿಯೊಬ್ಬರು ತಮ್ಮ ಪಾರ್ಕಿಂಗ್ ಲಾಟ್‌ನಲ್ಲಿ ಕಾರು ಪಾರ್ಕ್ ಮಾಡುತ್ತಿದ್ದ ಮಹಿಳೆಯೊಬ್ಬರೊಂದಿಗೆ ಜಗಳವಾಡಿಕೊಂಡು ಪ್ರಾಂಕ್ ಒಂದನ್ನು ಮಾಡಿದ್ದಾರೆ. ಆತನ ಈ ಪ್ರಾಂಕ್ ಅಂತರ್ಜಾಲದಲ್ಲಿ ವೈರಲ್ ಆಗಿದೆ.
ಈ ಪಾರ್ಕಿಂಗ್ ಲಾಟ್ ನಲ್ಲಿ ಬೇರಾವುದೇ ಕಾರನ್ನು ಪಾರ್ಕ್ ಮಾಡುವಂತಿಲ್ಲ ಎಂದು ಟೋಬೆ ಬೇಯ್ಲಿ ಹಾಗೂ ಆತನ ಮಡದಿ ಬೋರ್ಡ್ ಹಾಕಿದ್ದರೂ ಸಹ, ಅದೇ ಜಾಗದಲ್ಲಿ ಮತ್ತೊಬ್ಬ ಮಹಿಳೆ ತನ್ನ ಕಾರನ್ನು ಪಾರ್ಕ್ ಮಾಡಿದ್ದಾಳೆ. ತನ್ನ ಪಾರ್ಕಿಂಗ್ ಲಾಟ್‌ನಲ್ಲಿ ಬೇರೊಬ್ಬರ ಕಾರನ್ನು ಕಂಡ ಟೋಬೆ, ಆ ಕಾರನ್ನು ಅಲ್ಲಿಂದ ತೆರವುಗೊಳಿಸುವಂತೆ ಬೋರ್ಡ್ ಹಾಕಿದ್ದರೂ ಸಹ ಅದಕ್ಕೆ ಯಾರೂ ಕ್ಯಾರೇ ಅನ್ನಲಿಲ್ಲ.
ನೋಡುವಷ್ಟು ನೋಡಿದ ಟೋಬೆ, ಕಪ್ಪನೆಯ ಕವರ್ ಒಂದನ್ನು ತಂದು ಆ ಕಾರನ್ನು ಅದರಿಂದ ಮುಚ್ಚಿ, ಅದರ ಫೋಟೋವೊಂದನ್ನು ಫೇಸ್ಬುಕ್‌ನ ತನ್ನ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ವೈರಲ್ ಆಗುತ್ತಲೇ ಮನೆಯಿಂದ ಹೊರಬಂದ ಕಾರಿನ ಮಾಲಕಿ, ತನ್ನ ವರ್ತನೆಗೆ ಕ್ಷಮೆಯಾಚಿಸಿದ್ದು, ಕೂಡಲೇ ಅದನ್ನು ಅಲ್ಲಿಂದ ತೆರವುಗೊಳಿಸುವುದಾಗಿ ತಿಳಿಸಿದ್ದಾರೆ.
https://www.facebook.com/tobe.bailey/posts/10223069146058254