
ಹ್ಯಾರಿ ಮಿಚೆಲ್ ತಮ್ಮ ಗೆಳತಿ ನಿದ್ರೆಯಲ್ಲಿ ಮಾತನಾಡೋದನ್ನ ಗಮನಿಸಿದ್ದರು. ಆಕೆ ನಿದ್ರೆಯಲ್ಲಿ ಹಡಗು, ಏಡಿ ಹೀಗೆ ನಾನಾ ವಿಚಾರಗಳ ಬಗ್ಗೆ ಕನವರಿಸುತ್ತಿದ್ದರು. ಆಕೆಯ ಮಾತುಗಳನ್ನೆಲ್ಲ ನೋಟ್ ಮಾಡಿಕೊಂಡ ಹ್ಯಾರಿ ರೂಪಿ ಕೌರ್ರಂತೆಯೇ ಒಂದೊಂದು ಚಿತ್ರಗಳನ್ನ ಬಿಡಿಸಿ ಕವಿತೆ ಬರೆದಿದ್ದಾರೆ. ಹ್ಯಾರಿಯ ಈ ಪೋಸ್ಟ್ ಲಕ್ಷಕ್ಕೂ ಹೆಚ್ಚು ಲೈಕ್ಸ್ಗಳನ್ನ ಪಡೆದುಕೊಂಡಿದೆ.