ದೊಡ್ಡ ದೊಡ್ಡ ಮಾಲ್ಗಳಲ್ಲಿ ಹಾಗೂ ಸೂಪರ್ ಮಾರ್ಕೆಟ್ಗಳಲ್ಲಿ ವಾಹನಗಳನ್ನ ಪಾರ್ಕ್ ಮಾಡೋಕೆ ಅಂತಾನೇ ದೊಡ್ಡ ಸ್ಥಳಾವಕಾಶವನ್ನ ನೀಡಿರುತ್ತಾರೆ. ಪ್ರತಿ ಬಾರಿ ವಾಹನಗಳನ್ನ ತೆಗೆದುಕೊಂಡು ಹೋದಾಗ ಚಾಲಕರು ಸೂಕ್ತವಾದ ಜಾಗವೊಂದನ್ನ ಆಯ್ಕೆ ಮಾಡಿಕೊಳ್ತಾರೆ.
ಅಂದಹಾಗೆ ಕಾರು ಪಾರ್ಕಿಂಗ್ ವಿಚಾರವನ್ನ ನಾವೇಕೆ ಮಾತನಾಡುತ್ತಿದ್ದೇವೆ..? ಎಂದೆನಿಸಬಹುದು. ಆದರೆ ಇದಕ್ಕೆ ಕಾರಣವಿದೆ. ವ್ಯಕ್ತಿಯೊಬ್ಬ ತನ್ನ ಮನೆಯ ಸಮೀಪವಿದ್ದ ಸೂಪರ್ ಪಾರ್ಕೆಟ್ನ ಪಾರ್ಕಿಂಗ್ ಏರಿಯಾದ ಪ್ರತಿಯೊಂದು ಮೂಲೆಗಳಲ್ಲಿಯೂ ತನ್ನ ಕಾರನ್ನ ಪಾರ್ಕ್ ಮಾಡಿದ್ದಾರೆ. ಈತ ಪಾರ್ಕಿಂಗ್ ಏರಿಯಾದ ಪ್ರತಿಯೊಂದು ಕಡೆ ಕಾರುಗಳನ್ನ ನಿಲ್ಲಿಸೋಕೆ 6 ವರ್ಷ ಸಮಯಾವಕಾಶ ತೆಗೆದುಕೊಂಡಿದ್ದಾನೆ.
ಸೈನ್ಬರೀಸ್ ಕಾರು ಪಾರ್ಕಿಂಗ್ ಏರಿಯಾದಲ್ಲಿ ಗಾರೆತ್ ವೈಲ್ಡ್ ಎಂಬಾತ ಈ ಹೊಸ ಸಾಧನೆ ಮಾಡಿದ್ದಾನೆ. ತನ್ನ ದಾಖಲೆಯನ್ನ ಬರೆದಿಟ್ಟುಕೊಳ್ಳಲು ಈತ ಬಣ್ಣ ಬಣ್ಣದ ಚಿತ್ರಪಟವನ್ನ ಬಿಡಿಸಿಕೊಂಡಿದ್ದನು.
ಭಾರತೀಯ ವಿಮಾನಯಾತ್ರಿಗಳಿಗೆ ಥೈಲ್ಯಾಂಡ್ ನಿರ್ಬಂಧ: ಲಸಿಕೆ ಪಡೆದವರು ಮಾತ್ರ ದೇಶಕ್ಕೆ ಬನ್ನಿ ಎಂದ ಸೀಶೆಲ್ಸ್ ರಾಷ್ಟ್ರ
ವೈಲ್ಡ್ ತಾನು ಎಲ್ಲೆಲ್ಲಿ ಕಾರು ಪಾರ್ಕ್ ಮಾಡಿದ್ದೆ ಎಂದು ಗುರುತು ಮಾಡಿಕೊಳ್ಳೋದ್ರ ಜೊತೆಗೆ ಎಲ್ಲಿ ಕಾರು ಪಾರ್ಕ್ ಮಾಡಿದ್ರೆ ಒಳ್ಳೇದು ಹಾಗೂ ಯಾವ ಜಾಗ ಸೂಕ್ತವಲ್ಲ ಎಂಬ ವಿಚಾರವಾಗಿಯೂ ವಿವರಣೆ ನೀಡಿದ್ದಾನೆ. ಈ ವಿಚಾರವನ್ನ ಆತ ಟ್ವಿಟರ್ನಲ್ಲಿ ಶೇರ್ ಮಾಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಈತ ಈ ಸಾಧನೆಯನ್ನ ಪೂರ್ಣಗೊಳಿಸಬೇಕೆಂದೆ ವರ್ಷದಲ್ಲಿ ಕನಿಷ್ಟ 60 ಬಾರಿ ಸೂಪರ್ ಮಾರ್ಕೆಟ್ ಪಾರ್ಕಿಂಗ್ ಏರಿಯಾಗೆ ಭೇಟಿ ನೀಡುತ್ತಿದ್ದನಂತೆ.