ಲಾಕ್ ಡೌನ್ ಅವಧಿಯಲ್ಲಿ ಕಾಲ ಕಳೆಯಲಾಗದೆ ಮನೆ ಕ್ಲೀನ್ ಮಾಡಲು ಮುಂದಾದ 51 ವರ್ಷದ ವ್ಯಕ್ತಿಗೆ, ಅಟ್ಟದ ಮೇಲೆ 18 ನೇ ಶತಮಾನದ ಟೀ ಕುಡಿಯುವ ಹೂಜಿಯೊಂದು ಸಿಕ್ಕಿದೆ.
ಹಳೆಯ ವಸ್ತುಗಳನ್ನೆಲ್ಲಾ ಹೊರಹಾಕಿ, ಅಗತ್ಯ ವಸ್ತುಗಳನ್ನಷ್ಟೇ ಮನೆಯಲ್ಲಿ ಇಟ್ಟುಕೊಳ್ಳಬೇಕೆಂಬ ಕಾರಣದಿಂದ ಕ್ಲೀನಿಂಗ್ ಕಾರ್ಯಕ್ರಮ ಹಾಕಿಕೊಂಡ ವ್ಯಕ್ತಿಯು, ಹಲವು ವರ್ಷಗಳ ನಂತರ ಅಟ್ಟ ಸ್ವಚ್ಛಗೊಳಿಸಲು ಮುಂದಾಗಿದ್ದಾರೆ.
ಈ ಸಂದರ್ಭದಲ್ಲಿ ಟೀ ಕುಡಿಯುವ ಹೂಜಿ (ಟೀ ಪಾಟ್) ಸಿಕ್ಕಿದೆ. 20 ವರ್ಷದ ಹಿಂದೆ ತಾಯಿ ಬದುಕಿದ್ದಾಗ ಬಳಸುತ್ತಿದ್ದರು. ನಂತರದ ದಿನಗಳಲ್ಲಿ ಅಟ್ಟ ಸೇರಿತ್ತು.
ಇದರ ಬೆಲೆ ತಿಳಿಯದ ವ್ಯಕ್ತಿ, ಹಳೆಯ ಕಾಲದ್ದಾದ್ದರಿಂದ ಹರಾಜು ಹಾಕಲು ಮುಂದಾದರು. ಈ ಪ್ರಕ್ರಿಯೆಗಾಗಿ ವ್ಯಕ್ತಿಯೊಬ್ಬನ ಬಳಿ ಹೋಗಿ, ಪರಿಶೀಲಿಸಿ, ಅದಕ್ಕೊಂದು ಬೆಲೆ ಕಟ್ಟಲು ಹೇಳಿದರು.
ಬಹುಶಃ ಹೂಜಿಯು 1735-1799 ರ ಅವಧಿಯಲ್ಲಿ ಚೀನಾದಲ್ಲಿದ್ದ ಕಿನ್ ಲಾಂಡ್ ಅವಧಿಯದ್ದು ಎನಿಸುತ್ತದೆ. ಅತ್ಯಂತ ಸುಂದರವಾಗಿರುವ ಹೂಜಿ, ಅದರ ಪ್ರಾಚೀನತೆಯಿಂದಲೇ ಬೆಲೆ ಹೆಚ್ಚಿಸಿಕೊಳ್ಳುತ್ತದೆ.
ಏನಿಲ್ಲವೆಂದರೂ ಇದಕ್ಕೆ 20 ಸಾವಿರದಿಂದ 40 ಸಾವಿರ ಪೌಂಡ್ ಬೆಲೆ ಕಟ್ಟಬಹುದು. ಆದರೆ, ಅತ್ಯಪರೂಪದ್ದು ಎಂಬ ಕಾರಣದಿಂದ 1 ಲಕ್ಷ ಪೌಂಡ್ (95 ಲಕ್ಷ ರೂ.) ವರೆಗೆ ಬೆಲೆ ಹೆಚ್ಚಾಗಬಹುದು ಎನ್ನಲಾಗಿದೆ.
https://www.facebook.com/HansonsAuctioneersUK/posts/1508327082683694