ಕುಡಿದ ಮತ್ತಿನಲ್ಲಿ ನೀವು ಮಾಡಿದ ಅತ್ಯಂತ ಎಡವಟ್ಟಿನ ಕೆಲಸ ಯಾವುದು? ನೀವು ಏನನ್ನೇ ಮಾಡಿದ್ದರೂ ಸಹ ಇಲ್ಲೊಬ್ಬ ಭೂಪ ಮಾಡಿಕೊಂಡ ಎಡವಟ್ಟಿನ ಮುಂದೆ ನಿಮ್ಮದು ಏನೇನೂ ಅಲ್ಲ ಬಿಡಿ.
ಕುಡಿದ ಮತ್ತಿನಲ್ಲಿದ್ದ ರಾತ್ರಿಯೊಂದರ ವೇಳೆ ತನ್ನ ಹೆಸರನ್ನು ಅಧಿಕೃತವಾಗಿ ಸೆಲೈನ್ ಡಿಯಾನ್ ಎಂದು ಬದಲಿಸಿಕೊಂಡ ಥಾಮಸ್ ಡಾಡ್ (ಮಾಜಿ ಹೆಸರು) ಭಾರೀ ಸದ್ದು ಮಾಡಿದ್ದಾನೆ. ಕೆನಡಿಯನ್ ಗಾಯಕಿ ಸೆಲೈನ್ ಡಿಯಾನ್‌ನ ಅಪ್ಪಟ ಅಭಿಮಾನಿ ತಾನು ಎಂದು ಹೇಳಿಕೊಂಡಿರುವ ಈ ಎಡವಟ್ಟು ಅಣ್ಣಯ್ಯ, ಕ್ರಿಸ್ಮಸ್ ಸಂದರ್ಭದಲ್ಲಿ ಸುರಪಾನ ಮಿತಿ ಮೀರಿದಾಗ ಮಾಡಿಕೊಂಡಿದ್ದಾನೆ.
ತನ್ನ ಈ ಎಡವಟ್ಟಿನ ಬಗ್ಗೆ ತಿಳಿದ ತಾಯಿ ಹಾಗೂ ಸಹೋದರಿ ಶಾಕ್ ಆಗಿದ್ದಾರೆ ಎಂದ ಈತ, ಸದ್ಯಕ್ಕಂತೂ ತನ್ನ ಹಳೆಯ ಹೆಸರಿಗೆ ಶಿಫ್ಟ್ ಆಗುವ ಆಲೋಚನೆ ಇಲ್ಲ ಎಂದಿದ್ದಾನೆ.