ಫ್ರಾನ್ಸ್ ವಾಯುವ್ಯ ಭಾಗದ ಬ್ರಿಟಾನಿ ಮೂಲದ ವ್ಯಕ್ತಿಯೊಬ್ಬ ಲಾಕ್ಡೌನ್ ನಿಯಮ ಉಲ್ಲಂಘಿಸಿದ್ದಕ್ಕೆ ಕೊಟ್ಟ ಕಾರಣ ನೋಡಿ ಪೊಲೀಸರು ಶಾಕ್ ಆಗಿದ್ದಾರೆ.
ಕೊರೊನಾ ವೈರಸ್ 2ನೇ ಹಂತದ ಅಲೆಯನ್ನ ತಡೆಯುವ ಸಲುವಾಗಿ ಫ್ರಾನ್ಸ್ನಲ್ಲಿ ಕಠಿಣ ಲಾಕ್ಡೌನ್ ಜಾರಿ ಮಾಡಲಾಗಿದೆ.
ಲಾಕ್ಡೌನ್ ಸಮಯದಲ್ಲಿ ಮನೆಯಿಂದ ಜನರು ಹೊರಬರೋದಕ್ಕೂ ಕಡಿವಾಣ ಹೇರಲಾಗಿದೆ. ತುರ್ತು ಸಂದರ್ಭದಲ್ಲಿ ಮನೆಯಿಂದ ಹೊರ ಬರಲಿಚ್ಚಿಸುವವರು ಪೊಲೀಸರಿಗೆ ಲಿಖಿತ ರೂಪದಲ್ಲಿ ಕಾರಣವನ್ನ ತಿಳಿಸಬೇಕು ಎಂದು ಆದೇಶಿಸಲಾಗಿದೆ.
ಬ್ರಿಟಾನಿನಲ್ಲಿ ವ್ಯಕ್ತಿಯೊಬ್ಬ ಕಟ್ಟುನಿಟ್ಟಾದ ಲಾಕ್ಡೌನ್ ನಿಯಮಗಳನ್ನ ಉಲ್ಲಂಘಿಸಿ ಮನೆಯಿಂದ ಹೊರಬಂದಿದ್ದ. ಪೊಲೀಸರು ಆತನನ್ನ ಗುರುತಿಸುತ್ತಿದ್ದಂತೆ ಕಾರಿನ ಹಿಂದೆ ಅಡಗಿಕೊಳ್ಳಲು ಯತ್ನಿಸಿದ್ದಾನೆ.
ಆದರೆ ಆ ವ್ಯಕ್ತಿಯನ್ನ ಹಿಡಿದು ಮನೆಯಿಂದ ಹೊರಬಂದಿದ್ದಕ್ಕೆ ಕಾರಣ ಕೇಳಿದರೆ ತಾನು ವ್ಯಕ್ತಿಯೊಬ್ಬನ ಮುಖ ಒಡೆಯಲು ಹೋಗುತ್ತಿದ್ದೆ ಎಂದು ಹೇಳಿದ್ದಾನೆ. ಅಲ್ಲದೇ ಆತನ ಬಳಿ ಚಾಕು ಸಹ ಇತ್ತು ಎಂದು ಪೊಲೀಸರು ಹೇಳಿದ್ದಾರೆ. ಈತ ಕೊಟ್ಟ ಕಾರಣ ಸಮಂಜಸವಾಗಿರದ ಕಾರಣ ಪೊಲೀಸರು ದಂಡ ವಿಧಿಸಿದ್ದಾರೆ.