
ಇಂಡೋನೇಷಿಯಾದ ವ್ಯಕ್ತಿಯೊಬ್ಬ ಕೊರೊನಾದಿಂದ ಬಚಾವಾಗೋಕೆ ಸಂಪೂರ್ಣ ವಿಮಾನದ ಸೀಟ್ಗಳನ್ನ ತಾನೊಬ್ಬನೇ ಬುಕ್ ಮಾಡಿದ್ದಾನಂತೆ. ರಿಚರ್ಡ್ ಮುಲ್ಜಾದಿ ತನ್ನ ಪತ್ನಿಯೊಂದಿಗೆ ವಿಮಾನದಲ್ಲಿ ಪ್ರಯಾಣ ಮಾಡಬೇಕಾದ ಸಂದರ್ಭದಲ್ಲಿ ಈ ರೀತಿ ಮಾಡಿದ್ದಾನೆ.
ಐಶಾರಾಮಿ ಜೀವನಶೈಲಿ ಮೂಲಕವೇ ಸುದ್ದಿಯಲ್ಲಿರುವ ರಿಚರ್ಡ್ ಜಕಾರ್ತಾದಿಂದ ಬಾಲಿಗೆ ಏರ್ಫ್ಲೈಟ್ನಲ್ಲಿ ಪ್ರಯಾಣ ಮಾಡಿದ್ರು. ಈ ವೇಳೆ ಖಾಲಿ ವಿಮಾನದಲ್ಲಿ ತಾವು ಕುಳಿತಿರುವ ಫೋಟೋವನ್ನ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ರೀತಿ ಸಂಪೂರ್ಣ ವಿಮಾನದ ಟಿಕೆಟ್ಗಳನ್ನ ಖರೀದಿ ಮಾಡಲು ಅವರು ಎಷ್ಟು ಹಣ ಪಾವತಿ ಮಾಡಿದ್ದಾರೆ ಅನ್ನೋದನ್ನ ಬಹಿರಂಗಪಡಿಸಿಲ್ಲ. ಲಯನ್ ಏರ್ ಗ್ರೂಪ್ ಇಡೀ ವಿಮಾನದಲ್ಲಿ ರಿಚರ್ಡ್ ದಂಪತಿ ಮಾತ್ರ ಪ್ರಯಾಣಿಸಿದ್ದಾರೆ ಅನ್ನೋದನ್ನ ದೃಢಪಡಿಸಿದೆ.