ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಬಲಶಾಲಿ ವ್ಯಕ್ತಿಯೊಬ್ಬ ಅಪ್ರಾಪ್ತ ದರೋಡೆಕೋರನನ್ನು ಚಚ್ಚುವ ವಿಡಿಯೋ ಸಖತ್ ವೈರಲ್ ಆಗಿದೆ.
ಕಳೆದ ವಾರ ಕ್ಯಾಲಿಫೋರ್ನಿಯಾದ ಸ್ಯಾನ್ ಲಿಯಾಂಡ್ರೊದಲ್ಲಿ ಶಂಕಿತ ದರೋಡೆಕೋರ ದಾಳಿ ನಡೆಸಲು ಮುಂದಾದಾಗ ಪ್ರತಿರೋಧ ತೋರಿಸುವ ಸಂದರ್ಭ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
32 ಸೆಕೆಂಡುಗಳ ಈ ವಿಡಿಯೋದಲ್ಲಿ ಕಾಣುವಂತೆ, ಒಬ್ಬ ವ್ಯಕ್ತಿ ತನ್ನ ಎಸ್ಯುವಿ ಹಿಂಭಾಗಕ್ಕೆ ತೆರಳುತ್ತಿದ್ದಾಗ ಇಬ್ಬರು ದರೋಡೆಕೋರರು ಗನ್ ಹಿಡಿದು ತನ್ನತ್ತ ಬರುವುದನ್ನು ಗಮನಿಸುತ್ತಾನೆ. ಬಳಿಕ ಧೈರ್ಯಗೆಡದೆ ಶಸ್ತ್ರಸಜ್ಜಿತ ದಾಳಿಕೋರನಿಗೆ ಹೊಡೆದುರುಳಿಸಿದ್ದಾನೆ. ನಂತರ ಅವನನ್ನು ಎತ್ತಿ ನೆಲಕ್ಕೆ ಎಸೆಯುತ್ತಾನೆ, ಮುಷ್ಟಿ ಬಡಿದು ಎಸೆದುಬಿಡುತ್ತಾನೆ. ಗನ್ ಸಹ ದರೋಡೆಕೋರನ ಕೈ ತಪ್ಪುತ್ತದೆ.
ಕೋವಿಡ್ ನಿಯಮ ಪಾಲಿಸುವಂತೆ ಬುದ್ಧಿ ಹೇಳಿದ ಪೊಲೀಸರೊಂದಿಗೆ ವಾಗ್ವಾದ; ನಗರಸಭೆ ಉಪಾಧ್ಯಕ್ಷನ ಮಗನ ಬಂಧನ
ಈ ವೇಳೆ ಜತೆಗಾರನು ಮಂಡಿಯೂರಿ ಬಿಡುತ್ತಾನೆ. ನಂತರ ಇಬ್ಬರು ದಾಳಿಕೋರರು ಬಿಳಿ ಬಣ್ಣದ ವಾಹನ ಏರಿ ಪರಾರಿಯಾಗಿದ್ದಾರೆ. ಈ ಸಂದರ್ಭದಲ್ಲಿ ಗನ್ ರಸ್ತೆಯ ಮಧ್ಯದಲ್ಲಿ ಬಿಟ್ಟಿದ್ದಾರೆ.
ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟಿಜನ್‌ಗಳು ಪೆಟ್ಟು ತಿಂದವನನ್ನು ರಾಜಕೀಯ ನಾಯಕರಿಗೆ ಹೋಲಿಕೆ ಮಾಡಿ ನಕ್ಕಿದ್ದಾರೆ.
ದಾಳಿಕೋರರು ಮತ್ತು ಅವರ ಇತರ ಇಬ್ಬರು ಸಹಚರರು 11 ರಿಂದ 14 ವರ್ಷದೊಳಗಿನವರು. ಬಹು ಅಪರಾಧ ಪ್ರಕರಣದಲ್ಲಿದ್ದವರು. ಅವರು ಬ್ಯಾಂಕ್ ಗ್ರಾಹಕ ಮತ್ತು ಇತರ ಇಬ್ಬರು ಚಾಲಕರನ್ನು ಗುರಿಯಾಗಿಸಿಕೊಂಡಿದ್ದರು. ಆರೋಪಿಗಳನ್ನು ಪೊಲೀಸರು ಬಂಧಿಸಿ, ಮಕ್ಕಳ ಆರೈಕೆ ಕೇಂದ್ರಕ್ಕೆ ಕಳಿಸಿದ್ದಾರೆ.
https://www.instagram.com/p/CNw7WpcnwK0/?utm_source=ig_web_copy_link