ಪ್ಯಾರಿಸ್: ಕೆಲವೊಮ್ಮೆ ಸಣ್ಣ ಕೀಟಗಳು ದೊಡ್ಡ ಸಮಸ್ಯೆ ಸೃಷ್ಟಿಸಿಬಿಡುತ್ತವೆ. ಫ್ರಾನ್ಸ್ ನಲ್ಲಿ ಇಲೆಕ್ಟ್ರಿಕ್ ಬ್ಯಾಟಲ್ಲಿ ಸಣ್ಣ ಕೀಟ ಹೊಡೆಯಲು ಹೋದ ವ್ಯಕ್ತಿ ಸಂಕಷ್ಟಕ್ಕೆ ಸಿಲುಕಿದ ಸ್ಟೋರಿ ಇಲ್ಲಿದೆ.
ಫ್ರಾನ್ಸ್ ನ ಪಾರ್ಕೋಲ್ ಚೆನೌಡ್ ಎಂಬ ಗ್ರಾಮದಲ್ಲಿ 82 ವರ್ಷದ ವ್ಯಕ್ತಿ ಇಲೆಕ್ಟ್ರಿಕ್ ಬ್ಯಾಟ್ ಮೂಲಕ ಸಣ್ಣ ಕೀಟ ಹೊಡೆಯಲು ಮುಂದಾಗಿದ್ದ. ಆದರೆ, ಆತನ ಮನೆಯ ಕಬ್ಬಿಣದ ಪೆಟ್ಟಿಗೆಯೊಂದರಿಂದ ಗ್ಯಾಸ್ ಲೀಕೇಜ್ ಆಗಿ, ಇಲೆಕ್ಟ್ರಿಕ್ ಬ್ಯಾಟ್ ನಲ್ಲಿ ಸುಟ್ಟ ಕೀಟ ಹಾಗೂ ಗ್ಯಾಸ್ ನಡುವೆ ಕೆಮಿಕಲ್ ರಿಯಾಕ್ಷನ್ ಆಗಿದ್ದು, ಸ್ಫೋಟ ಸಂಭವಿಸಿದೆ.
ಸ್ಫೋಟದಿಂದ ಅಡುಗೆ ಮನೆಯ ಒಂದು ಭಾಗ ಧ್ವಂಸವಾಗಿದ್ದು, ಮನೆಯ ಅರ್ಧ ಮೇಲ್ಛಾವಣಿ ಹಾಳಾಗಿದೆ. ವ್ಯಕ್ತಿಯ ಕೈಗೆ ಗಾಯವಾಗಿದ್ದು ಸ್ಥಳೀಯ ಕ್ಲಿ ನಿಕ್ ಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಈಗ ಮನೆಯವರು ಹಾಳಾದ ಮನೆ ರಿಪೇರಿ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ವರದಿಯಾಗಿದೆ.