ಬಿಸಿ ನೀರಿನ ಬುಗ್ಗೆಯಲ್ಲಿ ಚಿಕನ್ ಖಾದ್ಯ ತಯಾರಿಸಲು ಮುಂದಾದ ಕಾರಣಕ್ಕೆ ಅಮೆರಿಕದ ಯೆಲ್ಲೋ ಸ್ಟೋನ್ ರಾಷ್ಟ್ರೀಯ ಉದ್ಯಾನವನದಿಂದ ವ್ಯಕ್ತಿಗೆ ನಿಷೇಧ ಹೇರಲಾಗಿದೆ. ಆಗಸ್ಟ್ 7ರಂದು ಶೋಶೋನ್ ಜಲಾನಯನ ಪ್ರದೇಶಕ್ಕೆ ಬಂದಿದ್ದ ಗುಂಪೊಂದು ಬಿಸಿ ನೀರಿನ ಬುಗ್ಗೆಯಲ್ಲಿ ಖಾದ್ಯ ತಯಾರಿಸಲು ಮುಂದಾಗಿತ್ತು.
ಇದನ್ನ ಗಮನಿಸಿದ ಉದ್ಯಾನವನದ ಅಧಿಕಾರಿ ಮ್ಯಾಮತ್ ಹಾಟ್ ಸ್ಟ್ರಿಂಗ್ ನ್ಯಾಯಾಲಯಕ್ಕೆ ಇವರನ್ನ ಹಾಜರುಪಡಿಸಿದ್ದರು. ಸೆಪ್ಟೆಂಬರ್ 10ರಂದು ಆರೋಪಿ ತಪ್ಪೊಪ್ಪಿಕೊಂಡ ಕಾರಣ 600 ಡಾಲರ್ ದಂಡ ಹಾಗೂ ಉದ್ಯಾನವನದ ಭೇಟಿಗೆ ನಿರ್ಬಂಧ ಹೇರಿ ಆದೇಶ ಹೊರಡಿಸಲಾಗಿದೆ.