ಬ್ರಿಟನ್ ನ್ಯಾಯಾಲಯವೊಂದು ವ್ಯಕ್ತಿಯೊಬ್ಬನಿಗೆ ವಿಚಿತ್ರ ಶಿಕ್ಷೆ ನೀಡಿದೆ. ಶಾರೀರಿಕ ಸಂಬಂಧ ಬೆಳೆಸಲು 24 ಗಂಟೆ ಮೊದಲು ವ್ಯಕ್ತಿ ಪೊಲೀಸರು ಹಾಗೂ ಹುಡುಗಿಯಿಂದ ಅನುಮತಿ ಪಡೆಯಬೇಕು. ಹಾಗೆ ಮಹಿಳೆಯರ ಜೊತೆ ಅನಗತ್ಯ ಮಾತುಕತೆ ನಡೆಸಬಾರದು ಎಂದು ಕೋರ್ಟ್ ಹೇಳಿದೆ.
39 ವರ್ಷದ ಡಿನ್ ಡಾಯನ್ ಗೆ ಕೋರ್ಟ್ ಈ ಶಿಕ್ಷೆ ನೀಡಿದೆ. ಡಿನ್ ಡಾಯನ್ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣವಿದೆ. ಪಾರ್ಟಿಯಲ್ಲಿ ಡಿನ್ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿದ್ದ. ಹಾಗೆ ಅತ್ಯಾಚಾರವೆಸಗುವ ಧಮಕಿ ನೀಡಿದ್ದನಂತೆ. ಈ ಬಗ್ಗೆ ವಿಚಾರಣೆ ನಡೆಯುತ್ತಿದೆ. ಆದ್ರೆ ಈವರೆಗೂ ಯಾವುದೇ ಪ್ರಕರಣ ಸಾಬೀತಾಗಿಲ್ಲ. 14 ವರ್ಷದ ಹುಡುಗಿ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಆರೋಪ ಸೇರಿದಂತೆ 7 ದೂರಿದೆ.
ಡಿನ್ ಮೇಲೆ ಲೈಂಗಿಕ ನಿರ್ಬಂಧ ಆದೇಶ ನೀಡಲಾಗಿದೆ. ಕೆಲಸಕ್ಕೆ ಸಂಬಂಧಿಸಿದ ವಿಷ್ಯಗಳನ್ನು ಬಿಟ್ಟರೆ ಬೇರೆ ಯಾವುದೇ ವಿಷ್ಯವನ್ನು ಮಹಿಳೆಯರ ಜೊತೆ ಮಾತನಾಡಬಾರದು ಎಂದು ಕೋರ್ಟ್ ಹೇಳಿದೆ. ಬ್ರಿಟನ್ ನಲ್ಲಿ ಲೈಂಗಿಕ ನಿರ್ಬಂಧ ಆದೇಶ ಸಿವಿಲ್ ಆದೇಶವಾಗಿರುತ್ತದೆ. ಇನ್ನೂ ತೀರ್ಪು ಬರದ ಪ್ರಕರಣದಲ್ಲಿ ಇಂತ ಆದೇಶ ನೀಡಲಾಗುತ್ತದೆ. ಆರೋಪಿಯನ್ನು ಸಮಾಜಕ್ಕೆ ಅಪಾಯವೆಂದು ಪರಿಗಣಿಸಲಾಗುತ್ತದೆ.