ಪಕ್ಕಾ ಶಾಖಾಹಾರಿಯಾದ ತನ್ನ ಪತ್ನಿ ಬರ್ಗರ್ನಲ್ಲಿ ಚೀಸ್ ಹಾಕಿಸಿಕೊಂಡು ತಿನ್ನಲು ಅವಕಾಶ ಕೊಡುವುದಿಲ್ಲ ಎಂದು ಪತಿರಾಯನೊಬ್ಬ ಮಾಡಿದ ಐಡಿಯಾವೊಂದು ರೆಡ್ಡಿಟ್ ನಲ್ಲಿ ಶೇರ್ ಆಗಿದೆ.
ತಾನು ಖರೀದಿಸಿದ $25.90 ಮೌಲ್ಯದ ವೆಗನ್ ಬರ್ಗರ್ಗೆ ಒಂದು ಸ್ಲೈಸ್ ಚೀಸ್ ಹಾಕಲು ಶೆಫ್ಗೆ ಕೋರಿಕೊಂಡಿದ್ದಾರೆ ಐಡೆನ್ ಹೆಸರಿನ ಈ ವ್ಯಕ್ತಿ. ತನಗೆ ನಾನ್ವೆ ಜ್ ಬರ್ಗರ್ ಇಷ್ಟವಾದರೂ ಸಹ ಹೃದ್ರೋಗ ಬರುವ ಭೀತಿಯಿಂದ ತನ್ನ ಮಡದಿ ಪರ್ಮಿಶನ್ ಕೊಡೋದಿಲ್ಲ ಅಂತ ಶೆಫ್ ಬಳಿ ಭಿನ್ನವಿಸಿಕೊಂಡಿದ್ದಾನೆ ಐಡೆನ್.
ಆನ್ಲೈನ್ ಆರ್ಡರ್ ಮಾಡುವ ಸಂದರ್ಭದಲ್ಲಿ ಐಡೆನ್ ಕಳಿಸಿದ ಈ ವಿಶೇಷ ಮನವಿಯ ಸ್ಕ್ರೀನ್ ಶಾಟ್ ಅನ್ನು ರೆಡ್ಡಿಟ್ ಬಳಕೆದಾರರೊಬ್ಬರು ಶೇರ್ ಮಾಡಿಕೊಂಡಿದ್ದು, “Possibly the best Uber request I’ve seen,” ಎಂದು ಹೇಳಿಕೊಂಡಿದ್ದಾರೆ.