
ಲಂಡನ್ ನಲ್ಲಿ ಪ್ರತಿಭಟನಾಕಾರನೊಬ್ಬ ಪೊಲೀಸ್ ಸ್ಮಾರಕಕ್ಕೆ ಮೂತ್ರ ಮಾಡಿ ಇದೀಗ ಬಂಧನಕ್ಕೊಳಗಾಗಿದ್ದಾನೆ. ಸೆಂಟ್ರಲ್ ಲಂಡನ್ ನಲ್ಲಿ ಪ್ರತಿಭಟನೆ ತೀವ್ರಗೊಂಡಿದ್ದು ಜನಾಂಗೀಯ ಹೋರಾಟದ ಪರ – ವಿರೋಧ ಜಟಾಪಟಿ ನಡೆದಿದೆ.
ಈ ವೇಳೆ, 28 ವರ್ಷದ ಯುವಕ ಪೊಲೀಸ್ ಸ್ಮಾರಕಕ್ಕೆ ಮೂತ್ರ ಮಾಡಿದ್ದಾನೆ. ಸಾರ್ವಜನಿಕ ಸಭ್ಯತೆ ಮೀರಿದ ಕಾರಣ ನೀಡಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.
2017ರಲ್ಲಿ ನಡೆದ ಗಲಭೆಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಕೀತ್ ಪಾಮರ್ ಹತ್ಯೆಯಾಗಿದ್ದರು. ಅವರನ್ನು ಸ್ಮರಿಸಲು ಸ್ಮಾರಕ ನಿರ್ಮಿಸಿದ್ದು ಅದರ ಮೇಲೆ ಆ ಯುವಕ ಮೂತ್ರ ಮಾಡಿದ್ದ. ಪೊಲೀಸರು ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.