ದಿನಕ್ಕೊಂದರಂತೆ ಕೆಎಫ್‌ಸಿಯ ಝಿಂಗರ್ ಬಾಕ್ಸ್‌ಗಳನ್ನು ನೂರು ದಿನಗಳ ಮಟ್ಟಿಗೆ ತಿನ್ನುವ ಸವಾಲನ್ನು ತೆಗೆದುಕೊಂಡಿರುವ ಆಸ್ಟ್ರೇಲಿಯಾದ ಸೀಮಸ್ ಮರ್ಫಿ ತಮ್ಮ ವಿಡಿಯೋಗಳ್ನು ಪ್ರತಿನಿತ್ಯ ಟಿಕ್‌ಟಾಕ್‌ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.
ಬಹಳ ಜನಪ್ರಿಯವಾದ KFC ಝಿಂಗರ್ ಬಾಕ್ಸ್‌ನಲ್ಲಿ ಝಿಂಗರ್ ಬರ್ಗರ್, ಹಾಟ್ ವಿಂಗ್ಸ್‌ಗಳು, ಚಿಪ್ಸ್, ಗ್ರೇವಿ ಹಾಗೂ ತಂಪು ಪಾನೀಯ ಇರುತ್ತದೆ. ವಯಸ್ಕ ವ್ಯಕ್ತಿಯೊಬ್ಬರು ಪ್ರತಿನಿತ್ಯ ಸೇವಿಸುವ ಅರ್ಧದಷ್ಟು ಕ್ಯಾಲೊರಿಗಳನ್ನು ಈ ಬಾಕ್ಸ್‌ನಲ್ಲಿರುವ ಐಟಮ್‌ಗಳು ಕೊಡುತ್ತವೆ. 100 ದಿನಗಳ ಮಟ್ಟಿಗೆ ಈ ಬರ್ಗರ್ ಬಾಕ್ಸ್‌ಗಳನ್ನು ಖಾಲಿ ಮಾಡುತ್ತಾ ಹೋದಲ್ಲಿ, ಒಟ್ಟಾರೆ 486,500 ಕಿಲೋ ಬೌಲ್‌ಗಳನ್ನು ಸೇವನೆ ಮಾಡಿದಂತಾಗುತ್ತದೆ.
ಅದಾಗಲೇ 44 ದಿನಗಳ ತನ್ನ ಮಿಶನ್ ಅನ್ನು ಕಂಪ್ಲೀಟ್ ಮಾಡಿರುವ ಈತನ ದೇಹದ ತೂಕದಲ್ಲಿ ಒಂದು ಕೆಜಿ ಹೆಚ್ಚಿರುವುದು ಕಂಡುಬಂದಿದೆ. ಸಾಮಾನ್ಯವಾಗಿ ಆಸ್ಟ್ರೇಲಿಯಾದಲ್ಲಿ ಝಿಂಗರ್ ಬಾಕ್ಸ್ ಒಂದಕ್ಕೆ 11.45 ಡಾಲರ್ ಖರ್ಚಾಗುತ್ತದೆ. ಈತ ಇಲ್ಲಿವರೆಗೂ ತನ್ನ ಫ್ರೈಡ್ ಚಿಕನ್ ಮೀಲ್‌ಗಳ ಮೇಲೆ 1,145 ಡಾಲರ್‌ಗಳನ್ನು ವ್ಯಯಿಸಿದ್ದಾನೆ. ಕೆಲವೊಮ್ಮೆ ಈತನ ’ಸಾಧನೆʼಗೆ ನೆರವಾಗಲೆಂದು ಸ್ನೇಹಿತರು ಝಿಂಗರ್ ಬಾಕ್ಸ್‌ಗಳನ್ನು ಪ್ರಾಯೋಜಿಸಿದ್ದಾರಂತೆ.
https://www.youtube.com/watch?v=dCZC7lEVD1Q&feature=emb_logo