
ಮಲೇಷ್ಯಾದ ಯುವಕನೊಬ್ಬನ ಮೊಬೈಲ್ ಕಳೆದು ಹೋಗಿತ್ತು. ಆದರೆ ಬಳಿಕ ಮೊಬೈಲ್ ಟ್ರೇಸ್ ಮಾಡಿ ವಾಪಸು ಪಡೆದಾಗ ಆತನಿಗೆ ಅಚ್ಚರಿಯೊಂದು ಕಾದಿತ್ತು. ಅದೇನೆಂದರೆ, ಮಂಗ ಯುವಕನ ಮೊಬೈಲ್ ನಲ್ಲಿ ಸೆಲ್ಫಿ ತಗೆದುಕೊಂಡಿತ್ತು.
ಹೌದು, ಅಚ್ಚರಿಯ ರೀತಿಯಲ್ಲಿ ಕೋತಿಯೊಂದು ಮೊಬೈಲ್‌ನಲ್ಲಿ ಫೋಟೋ ಹಾಗೂ ವಿಡಿಯೊ ಸೆಲ್ಫಿ ಮಾಡಿರುವ ಘಟನೆ ನಡೆದಿದೆ. ಝಾಕ್ರಿಡ್ಜ್ ರೊಡ್ಜಿ ಎನ್ನುವ 20 ವರ್ಷದ ಯುವಕನ ಮೊಬೈಲ್‌ನಲ್ಲಿ ಈ ರೀತಿಯಾಗಿದೆ. ಆತ ಮಲಗಿದ್ದಾಗ ಮೊಬೈಲ್ ಕಾಣೆಯಾಗಿತ್ತು. ಆದರೆ ಮೊಬೈಲ್ ಕದಿಯುವುದಕ್ಕೆ ಯಾವುದೇ ಪುರಾವೆ ಇರಲಿಲ್ಲ. ಮರುದಿನ ಆತನ ಮನೆಯ ಮುಂದೆ ಕೋತಿಯೊಂದು ಮೊಬೈಲ್ ಹಿಡಿದು ಕೂತಿದ್ದನ್ನು ನೋಡಿದಾಗ, ಆತನ ತಂದೆ ರೊಡ್ಜಿ ಮೊಬೈಲ್‌ಗೆ ಕರೆ ಮಾಡಿದ್ದಾರೆ. ಆಗ ಕೋತಿ ಬಳಿಯಿರುವುದು ಮಗನ ಮೊಬೈಲ್ ಎನ್ನುವುದು ಗೊತ್ತಾಗಿದೆ.
ಬಳಿಕ ಮಂಗನಿಂದ ಮೊಬೈಲ್ ಅನ್ನು ಕಷ್ಟಪಟ್ಟು ವಾಪಸು ಪಡೆದುಕೊಂಡ ಬಳಿಕ ರೊಡ್ಜಿ ಮೊಬೈಲ್ ಗ್ಯಾಲರಿ ನೋಡಿದಾಗ ಕೋತಿ ವಿಡಿಯೊ, ಫೋಟೋ ತೆಗೆದುಕೊಂಡಿರುವುದು ತಿಳಿದಿದೆ. ಇದೀಗ ಈ ಫೋಟೋ ವಿಡಿಯೊಗಳು ಭಾರಿ ವೈರಲ್ ಆಗಿವೆ.
https://twitter.com/Zackrydz/status/1305115289269362688?ref_src=twsrc%5Etfw%7Ctwcamp%5Etweetembed%7Ctwterm%5E1305115289269362688%7Ctwgr%5Eshare_2&ref_url=https%3A%2F%2Fwww.news18.com%2Fnews%2Fbuzz%2Fmalaysian-man-finds-selfies-and-videos-taken-by-monkeys-after-recovering-lost-phone-2879013.html