ನೋಬೆಲ್ ಪುರಸ್ಕೃತೆ ಹಾಗೂ ಆಕ್ಟಿವಿಸ್ಟ್ ಮಲಾಲಾ ಯೂಸುಫ್‌ಝಾಯ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. 2011ರಲ್ಲಿ ಮಲಾಲಾಗೆ ಗುಂಡಿಕ್ಕುವ ಯೋಜನೆ ಹಾಕಿದ್ದ ಪಾಕಿಸ್ತಾನಿ ಭಯೋತ್ಪಾದಕ ಜೈಲಿನಿಂದ ಬಿಡುಗಡೆಯಾಗಿದ್ದಾನೆ.
ಪಾಕಿಸ್ತಾನಿ ತಾಲಿಬಾನ್‌ನ ವಕ್ತಾರ ಎಹ್ಸಾನುಲ್ಲಾ ಎಹ್ಸಾನ್ ತನ್ನ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿ, “ಮತ್ತೆ ಮನೆಗೆ ಬಾ, ಸೇಡು ತೀರಿಸಿಕೊಳ್ಳುವುದು ಬಾಕಿ ಇದೆ” ಎಂದಿದ್ದು, “ಈ ಬಾರಿ ಗುರಿ ತಪ್ಪುವುದಿಲ್ಲ” ಎಂದು ವಾರ್ನಿಂಗ್ ಕೊಟ್ಟಿದ್ದಾನೆ.
ಇದಕ್ಕೆ ಪ್ರತಿಕ್ರಿಯಿಸಿದ ಮಲಾಲಾ, “ನನ್ನ ಹಾಗೂ ಅನೇಕ ಅಮಾಯಕರ ಮೇಲೆ ದಾಳಿ ಮಾಡಿದ ಹೊಣೆ ಹೊತ್ತಿರುವ ತೆಹ್ರಿಕ್-ಎ-ತಾಲಿಬಾನ್‌ನ ಮಾಜಿ ವಕ್ತಾರ ಈತ. ಈಗ ಇವನು ಸಾಮಾಜಿಕ ಜಾಲತಾಣದಲ್ಲಿ ಜನರಿಗೆ ಬೆದರಿಕೆಯೊಡ್ಡುತ್ತಿದ್ದಾನೆ. ಈತ ಅದು ಹೇಗೆ ಪರಾರಿಯಾದ?” ಎಂದು ಬರೆದಿದ್ದಾರೆ ಮಲಾಲಾ.
ಬೈಕ್ ನಲ್ಲಿ ಗಾಂಜಾ ಪತ್ತೆ ಪ್ರಕರಣ; ವೈಭವ್ ಜೈನ್ ಗೆ ಮತ್ತೆ ಸಂಕಷ್ಟ
2011ರಲ್ಲಿ ಪಾಕಿಸ್ತಾನದಲ್ಲಿ ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕುಗಳ ಅಭಿಯಾನದಲ್ಲಿ ಭಾಗಿಯಾಗಿದ್ದ ಮಲಾಲಾಗೆ ಭಯೋತ್ಪಾಕರು ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಮಲಾಲಾ ಬದುಕುಳಿದರೆ ಆಕೆಯನ್ನು ಮತ್ತೆ ಸಾಯಿಸಲು ನೋಡುವುದಾಗಿ ತಾಲಿಬಾನ್ ಹೇಳಿಕೆ ಬಿಡುಗಡೆ ಮಾಡಿತ್ತು.
ಸದ್ಯ ಇಂಗ್ಲೆಂಡ್‌ನಲ್ಲಿರುವ ಮಲಾಲಾ, ತನ್ನ ಹೆಸರಿನಲ್ಲಿ ನಿಧಿಯೊಂದನ್ನು ಸ್ಥಾಪಿಸಿ ಮಾನವ ಹಕ್ಕುಗಳ ಕಾರ್ಯಕರ್ತೆಯಾಗಿ ಸಕ್ರಿಯವಾಗಿದ್ದಾರೆ.