ದೊಡ್ಡ ಅಲೆಗಳ ಮೇಲೆ ಸರ್ಫಿಂಗ್ ಮಾಡುವ ಡಗ್ ಫಾಲ್ಟರ್ ಹವಾಯಿಯಲ್ಲಿ ತಮ್ಮ ಸರ್ಫ್ ಬೋರ್ಡ್ ಅನ್ನು ಕಳೆದುಕೊಂಡಿದ್ದಾರೆ. ಬಹುತೇಕ ನಿದರ್ಶನಗಳಲ್ಲಿ ಆ ಬೋರ್ಡ್ ಅಲ್ಲೇ ಯಾರಾದರೊಬ್ಬರ ಮೀನುಗಾರನಿಗೆ ಸಿಗಬೇಕಿತ್ತು. ಆದರೆ, ಯಾರೂ ಸಹ ಊಹಿಸಲು ಸಾಧ್ಯವಿಲ್ಲದ ರೀತಿಯಲ್ಲಿ, ಅಲ್ಲಿಂದ 8000 ಕಿಮೀ ದೂರದ ಫಿಲಿಪ್ಪೀನ್ಸ್ ಬಳಿ ಸಿಕ್ಕಿದೆ.
ಬ್ಲೂ ಮೂನ್ ಥೀಮ್ ನಲ್ಲಿ ತನ್ನ ಅಭಿರುಚಿಗೆ ತಕ್ಕಂತೆ ಮಾಡಿಸಿಕೊಂಡಿದ್ದ ಈ ಸರ್ಫಿಂಗ್ ಬೋರ್ಡ್ ಅನ್ನು ಹವಾಯಿಯ ಒ’ಆಹು ದ್ವೀಪದಲ್ಲಿ ಕಳೆದುಕೊಂಡ ಎರಡು ವರ್ಷಗಳ ಬಳಿಕ ಮತ್ತೆ ಫಾಲ್ಟರ್‌ಗೆ ಸಿಕ್ಕಿದೆ. ದಕ್ಷಿಣ ಫಿಲಿಪ್ಪೀನ್ಸ್‌ನ ಸರಂಗಾನಿ ದ್ವೀಪದ ಬಳಿ ಈ ಬೋರ್ಡ್ ಸಿಕ್ಕಿದ ಕೂಡಲೇ ಸಾಮಾಜಿಕ ಜಾಲತಾಣದಲ್ಲಿ ಯಾರೋ ಒಬ್ಬರು ಫಾಲ್ಟರ್‌ಗೆ ಅಲರ್ಟ್ ಮಾಡಿದ್ದಾರೆ.
ಆ ಬೋರ್ಡ್‌ನ ಹೊಸ ಮಾಲೀಕ ಗಿಯೋವೇನ್ ಬ್ರಾಂಝುಯೆಲಾ, ಫಾಲ್ಟರ್‌ರ ಈ ಪ್ರಹಸನದ ಬಗ್ಗೆ ಪೇಸ್ಬುಕ್ ನಲ್ಲಿ ತಿಳಿದ ಬಳಿಕ ಅವರನ್ನು ಸಂಪರ್ಕಿಸಿದ್ದಾರೆ.
ಕನಸಿನಲ್ಲೂ ಊಹಿಸಲು ಸಾಧ್ಯವಿರದ ಘಟನೆಯೊಂದು ತಮ್ಮ ಜೀವನದಲ್ಲಿ ಘಟಿಸಿದ ಅನುಭವವನ್ನು ಫಾಲ್ಟರ್ ಫೇಸ್ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.
https://www.facebook.com/DougFalterPhotography/posts/3129821527066056