alex Certify ಅವಳಿ ಮಕ್ಕಳ ಪಾಲಿಗೆ ಸಾಂತಾ ಆಗಿ ಬದಲಾದ ಅಪರಿಚಿತ ವ್ಯಕ್ತಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅವಳಿ ಮಕ್ಕಳ ಪಾಲಿಗೆ ಸಾಂತಾ ಆಗಿ ಬದಲಾದ ಅಪರಿಚಿತ ವ್ಯಕ್ತಿ..!

ಕ್ರಿಸ್​ಮಸ್​ ಅಂದರೆ ಬಹುತೇಕ ಎಲ್ಲರಿಗೂ ಇಷ್ಟವಾಗುವಂತಹ ಹಬ್ಬ. ಅದರಲ್ಲೂ ಮಕ್ಕಳಿಗೆ ಸಾಂತಾ ಕ್ಲಾಸ್​ ಗಿಫ್ಟ್ ನೀಡುತ್ತಾನೆ ಎಂಬ ಕಾರಣಕ್ಕೆ ಈ ಹಬ್ಬ ಇನ್ನೂ ಇಷ್ಟವಾಗುತ್ತೆ.

ಆದರೆ ತನ್ನ ಜೀವನದಲ್ಲೂ ಈವರೆಗೂ ಭೇಟಿಯಾಗದ ಅವಳಿಗಳಿಗೆ 600 ಮೈಲಿ ದೂರ ವಾಸವಿದ್ದ ಅಪರಿಚಿತ ವ್ಯಕ್ತಿಯೊಬ್ಬ ಸಾಂತಾ ಆಗಿ ಬದಲಾಗಿದ್ದಾನೆ. ಕ್ರಿಸ್​ಮಸ್​ ಹಬ್ಬ ಕಳೆದು ಕೆಲ ತಿಂಗಳ ಬಳಿಕ ಅವಳಿಗಳಿಗೆ ಉಡುಗೊರೆ ನೀಡುವಲ್ಲಿ ಈ ಸಾಂತಾ ಯಶಸ್ವಿಯಾಗಿದ್ದಾರೆ.

ಅಮೆರಿಕದ ಲ್ಯುಸಿಯಾನ ನಿವಾಸಿಯಾಗಿರುವ ಅಲ್ವಿನ್​​​ ಬಾಂಬರ್ಗ್​ ಎಂಬಾತ ಕಳೆದ ವರ್ಷ ಡಿಸೆಂಬರ್​ ತಿಂಗಳಲ್ಲಿ ನಕ್ಷತ್ರದ ಆಕಾರದ ಕೆಂಪು ಬಣ್ಣದ ಬಲೂನ್​ ಒಂದನ್ನ ನೋಡಿದ್ದರು. ಕಸದ ರಾಶಿಯಲ್ಲಿ ಬಿದ್ದಿದ್ದ ಈ ಬಲೂನ್​ನ ಮೇಲೆ ಒಂದು ಪುಟ್ಟ ಟಿಪ್ಪಣಿಯನ್ನ ಬರೆಯಲಾಗಿತ್ತು. ಇದರಲ್ಲಿ ಪ್ರೀತಿಯ ಸಾಂತಾ, ನನ್ನ ಹೆಸರು ಲುನಾ, ನನಗೆ ನಾಲ್ಕು ವರ್ಷ ವಯಸ್ಸು, ನಾನು ಕೆನಾಸ್​ನ ಲಿಬರಲ್​ನಲ್ಲಿ ವಾಸವಿದ್ದೇನೆ. ಈ ವರ್ಷ ನೀವು ನನಗೆ ಕ್ಯಾಂಡಿ, ಸ್ಪೈಡರ್​ ಮ್ಯಾನ್​ ಬಾಲ್​, ಗೊಂಬೆ, ನಾಯಿ ಹಾಗೂ ನನ್ನ ಲಿಟಲ್​ ಪೊನಿಯನ್ನ ತಂದುಕೊಡಿ ಎಂದು ಬರೆಯಲಾಗಿತ್ತು.

ಬಾಂಬರ್ಗ್ ಈ ಬಲೂನಿನ ಫೋಟೋವನ್ನ ಫೇಸ್​ಬುಕ್​ನಲ್ಲಿ ಶೇರ್​ ಮಾಡಿದ್ದರು. ಅಲ್ಲದೇ ಕೆನಾಸ್​ನಲ್ಲಿ ವಾಸಿಸುತ್ತಿದ್ದರ ಅನೇಕರ ಬಳಿ ಈ ಬಲೂನು ಯಾರಿಗೆ ಸೇರಿದ್ದೆಂದು ವಿಚಾರಿಸಿದ್ದಾರೆ. ಸಾಕಷ್ಟು ಹುಡುಕಾಟದ ಬಳಿಕ ಇದು ಅವಳಿ ಹೆಣ್ಣು ಮಕ್ಕಳ ಕೆಲಸ ಎಂದು ತಿಳಿದಿದೆ. ಲುನಾ ಹಾಗೂ ಜೆನಿಲಿಯಾ ಎಂಬ ಪುಟ್ಟ ಬಾಲಕಿಯರು ಡಿಸೆಂಬರ್​ 2ರಂದು ಈ ಬಲೂನನ್ನು ಹಾರಿ ಬಿಟ್ಟಿದ್ದರಂತೆ.

ಮೆಕ್ಸಿಕೋದಲ್ಲಿ ಪ್ರವಾಸಕ್ಕೆ ತೆರಳಿದ್ದ ವೇಳೆ ಅವಳಿ ಸಹೋದರಿಯರು ಈ ಬಲೂನನ್ನು ಹಾರಿಸಿದ್ದಾರೆ. ಮಕ್ಕಳನ್ನ ಪತ್ತೆ ಮಾಡಿದ ಬಳಿ ಅವರ ತಾಯಿಯೊಂದಿಗೆ ಸಂಪರ್ಕದಲ್ಲಿದ್ದ ಬಾಂಬರ್ಗ್​ ಫೇಸ್​ಬುಕ್​ನಲ್ಲಿ ಮಕ್ಕಳಿಗೆ ಯಾರಾದರೂ ಉಡುಗೊರೆ ನೀಡಲು ಬಯಸುವಿರಾ ಎಂದು ಕೇಳಿದ್ದರು.

ಇದೀಗ ನಾಲ್ಕು ದೊಡ್ಡ ಬಾಕ್ಸ್​ಗಳಲ್ಲಿ ಈ ಮಕ್ಕಳಿಗೆ ಉಡುಗೊರೆ ಬಂದಿದೆ. ನಾಯಿ ಮರಿ ಸೇರಿದಂತೆ ಎಲ್ಲಾ ರೀತಿಯ ಗಿಫ್ಟ್​ಗಳನ್ನ ಈ ಅವಳಿ ಮಕ್ಕಳು ಪಡೆದಿದ್ದಾರೆ. ಈ ಪೋಸ್ಟ್​ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...