ಬಾಡಿಗೆ ತಾಯಿಯನ್ನು ಕೇಳಿದ್ದೇವೆ. ಇಲ್ಲಿ ಬಾಡಿಗೆ ತಂದೆಯೂ ಲಭ್ಯ. ಆತನಿಗೆ ತಾಸಿಗೆ 2500 ರೂ. ಶುಲ್ಕ ನೀಡಬೇಕು.
ಹೌದು, ಮಕ್ಕಳನ್ನು ನೋಡಿಕೊಳ್ಳುವುದು ದೊಡ್ಡ ಸವಾಲು. ಹಲವು ಬಾರಿ ಇಡೀ ದಿನ ಮಕ್ಕಳ ಪಾಲನೆಯಲ್ಲೇ ಕಳೆದುಬಿಡುತ್ತದೆ. ಅದಕ್ಕೆ ಯುನೈಟೆಡ್ ಕಿಂಗ್ಡಮ್ ನ ಈ ವ್ಯಕ್ತಿ ಹೊಸ ಉಪಾಯ ಹುಡುಕಿದ್ದಾನೆ.
ಸೌತ್ ವೆಲ್ಸ್ ಬ್ಲ್ಯೂ ಹೆವನ್ ನ ಜಾಕ್ ಜೇಮ್ಸ್ ಬಾಡಿಗೆ ತಂದೆಯಾಗುವ ಹೊಸ ಉದ್ಯೋಗ ಪ್ರಾರಂಭಿಸಿದ್ದಾನೆ. ಫೇಸ್ ಬುಕ್ ಇನ್ಸ್ಟಾಗ್ರಾಂನಲ್ಲಿ ತಮ್ಮದೇ ಕೊಲಾಜ್ ನೊಂದಿಗೆ ಜಾಕ್ ಈ ವಿಚಾರ ಹಂಚಿಕೊಂಡಿದ್ದಾನೆ.
“ಟ್ರಕ್ ನಿಂದ ದೂರವಾಗಿ ಹೊಸ ವೃತ್ತಿ ಆರಂಭಿಸಿದ್ದೇನೆ. ನಿಮ್ಮ ಮಗುವಿಗೆ ಬೆಂಬಲವಾಗಿ ನಿಲ್ಲುತ್ತೇನೆ. ರೆಂಟ್ ಎ ಡ್ಯಾಡಿ ಟುಡೆ” ಎಂದು ಜಾಕ್ ಹೇಳಿಕೊಂಡಿದ್ದಾನೆ.
ಮಕ್ಕಳನ್ನು ನೋಡಿಕೊಂಡಿದ್ದಕ್ಕೆ ತಾಸಿಗೆ 30 ಡಾಲರ್ ಭಾನುವಾರ ಶೇ.20 ರಷ್ಟು ಹೆಚ್ಚುವರಿ ಶುಲ್ಕ ನೀಡಬೇಕು. ನಗದು ಅಥವಾ ಆನ್ ಲೈನ್ ಟ್ರಾನ್ಸಾಕ್ಷನ್ ಮೂಲಕವೂ ಹಣ ಪಾವತಿಸಬಹುದು ಎಂದು ಜಾಕ್ ಬರೆದಿದ್ದಾನೆ. ಆತನ ವಿಚಾರಕ್ಕೆ ಜಾಲತಾಣದಲ್ಲಿ ಸಾವಿರಕ್ಕೂ ಹೆಚ್ಚು ಜನ ಪ್ರತಿಕ್ರಿಯಿಸಿದ್ದಾರೆ.