ಬೆಕ್ಕುಗಳನ್ನ ಚೇಷ್ಠೆ ಹೇಗಿರುತ್ತೆ ಅನ್ನೋದು ಅದನ್ನ ಸಾಕಿದವರಿಗೇ ಗೊತ್ತು. ಮನೆಯ ಮಾಲೀಕ ಅದಕ್ಕೆ ಇಷ್ಟ ಆದ ಅಂದ್ರೆ ಈ ಬೆಕ್ಕುಗಳು ಅವರಿಗೆ ಗಿಫ್ಟ್ಗಳನ್ನೂ ನೀಡುತ್ತೆ ಅಂತಾರೆ ಪ್ರಾಣಿ ತಜ್ಞರು. ಗಿಫ್ಟ್ ಅಂದರೆ ತಾನು ಬೇಟೆಯಾಡಿ ತಂದ ಹುಳ, ಇಲಿ.
ಇದೇ ರೀತಿ ಯುಎಸ್ನ ಫ್ಲೋರಿಡಾದಲ್ಲಿ ವಾಸವಿದ್ದ ಬೆಕ್ಕೊಂದು ತನ್ನ ಮನೆಯ ಮಾಲೀಕನಿಗೆ ಬೆಲೆಬಾಳುವ ಎರಡು ತಲೆ ಹಾವನ್ನ ಬೇಟೆಯಾಡಿ ತಂದುಕೊಟ್ಟಿದೆ. ಮನೆಯಲ್ಲಿದ್ದ ಪುತ್ರಿ ತನ್ನ ತಾಯಿಗೆ ಕರೆ ಮಾಡಿ ಈ ವಿಚಾರವನ್ನ ಹೇಳಿದ್ದಾರೆ. ಕೂಡಲೇ ಮನೆ ಮಾಲೀಕೆ ಈ ವಿಚಾರವನ್ನ ಅರಣ್ಯಾಧಿಕಾರಿಗಳಿಗೆ ತಿಳಿಸಿದ್ದಾರೆ.
ವಿಷ್ಯ ತಿಳಿತಾ ಇದ್ದಂತೆ ಸ್ಥಳಕ್ಕಾಗಮಿಸಿದ ವನ್ಯ ಪ್ರಾಣಿ ರಕ್ಷಣಾ ಇಲಾಖೆ ಈ ಹಾವನ್ನ ಬ್ಲಾಕ್ ರೇಸರ್ ಹಾವು ಅಂತಾ ಹೇಳಿದ್ದಾರೆ. ಮನುಷ್ಯರಿಗೆ ಸಯಾಮಿ ಮಕ್ಕಳು ಜನಿಸಿದಂತೆ ಹಾವಿಗೂ ಇದೇ ತರ ಎರಡು ತಲೆ ಹಾವು ಜನ್ಮ ನೀಡುತ್ತವಂತೆ. ವೈಜ್ಞಾನಿಕ ಭಾಷೆಯಲ್ಲಿ ಬೈಸ್ ಫಾಲಿ ಅಂತಾ ಕರೆಯಲಾಗುತ್ತೆ.