alex Certify ಸಹಪಾಠಿಯೊಂದಿಗೆ ಹೊಸ ಜೀವನ ಆರಂಭಿಸಿದ ಪಾಕ್​ನ ಏಕಾಂಗಿ ಆನೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಹಪಾಠಿಯೊಂದಿಗೆ ಹೊಸ ಜೀವನ ಆರಂಭಿಸಿದ ಪಾಕ್​ನ ಏಕಾಂಗಿ ಆನೆ..!

ಪಾಕಿಸ್ತಾನದ ಮೃಗಾಲಯದಲ್ಲಿ ಏಕಾಂಗಿಯಾಗಿ ಜೀವನ ಸವೆಸಿದ್ದ ಆನೆ ಕಾವನ್​ ಇದೀಗ ಕಾಂಬೋಡಿಯಾದ ಅಭಯಾರಣ್ಯದಲಲ್ಲಿ ಹೊಸ ಜೀವನವನ್ನ ಆರಂಭಿಸಿದೆ. ಬರೋಬ್ಬರಿ 8 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಮತ್ತೊಂದು ಆನೆಯ ಜೊತೆ ಕಾಲಕಳೆದಿದೆ.

36 ವರ್ಷದ ಆನೆ ಇಸ್ಲಾಮಾಬಾದ್​​ನ ಮೃಗಾಲಯದಲ್ಲಿದ್ದ ಏಕೈಕ ಏಷಿಯನ್​ ಆನೆಯಾಗಿತ್ತು. ಇದರ ಏಕಾಂಗಿತನ ನೋಡಿ ಮರುಗಿದ ಅಮೆರಿಕದ ಗಾಯಕಿ ಚೆರ್​ ಸಾಮಾಜಿಕ ಮಾಧ್ಯಮ ಹಾಗೂ ಪ್ರಾಣಿ ಪ್ರಿಯರ ನೆರವಿನಿಂದ ಅಭಿಯಾನವನ್ನ ನಡೆಸಿ ಆನೆಯನ್ನ ಕಾಂಬೋಡಿಯಾ ಅಭಯಾರಣ್ಯಕ್ಕೆ ವರ್ಗಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ರು.

ಕುಲೆನ್​ ಪ್ರಾಮ್​ ಟೆಪ್​ ವನ್ಯಜೀವಿ ಅಭಯಾರಣ್ಯದಲ್ಲಿರುವ ಕಾವನ್​ ತನ್ನ ಸೊಂಡಿಲಿನಿಂದ ಮತ್ತೊಂದು ಆನೆಯ ಸೊಂಡಿಲನ್ನ ಸ್ಪರ್ಶಿಸಿದ್ದು ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...