ಕೊರೊನಾ ಲಾಕ್ ಡೌನ್ ಅವಧಿಯಲ್ಲಿ ಕೇವಲ ಮಾನವರು ಮಾತ್ರವಲ್ಲದೇ ಪ್ರಾಣಿಗಳೂ ಸಹ ತೂಕ ಹೆಚ್ಚಿಸಿಕೊಂಡಿರುವ ಅನುಮಾನ ಲಂಡನ್ ಮೃಗಾಲಯಕ್ಕೆ ಬಂದಂತಿದೆ.
ದ್ವಿತೀಯ ವಿಶ್ವ ಮಹಾಯುದ್ಧದ ಬಳಿಕ ಅತ್ಯಂತ ಸುದೀರ್ಘಾವಧಿಗೆ ಮುಚ್ಚಲ್ಪಟ್ಟಿರುವ ಲಂಡನ್ ಮೃಗಾಲಯವು 200 ವರ್ಷದಷ್ಟು ಹಳೆಯದಾಗಿದೆ. ಈ ಲಾಕ್ ಡೌನ್ ಅವಧಿಯಲ್ಲಿ ಏನೆಲ್ಲಾ ಬದಲಾವಣೆಗಳು ಆಗಿವೆ ಎಂದು ತಿಳಿಯಲು 19,000 ಪ್ರಾಣಿಗಳ ತೂಕ ಮಾಡಲಾಗುತ್ತಿದೆ.
ಮೂರು ತಿಂಗಳ ಲಾಕ್ ಡೌನ್ ಬಳಿಕ, ಜೂನ್ 15ರಿಂದ ಸೀಮಿತ ಮಟ್ಟದಲ್ಲಿ ಮೃಗಾಲಯವನ್ನು ವೀಕ್ಷಕರಿಗೆ ಮತ್ತೆ ಮುಕ್ತವಾಗಿಸಲಾಗಿದೆ. ಆದಾಯದ ಕೊರತೆಯ ಕಾರಣ ಲಂಡನ್ ಮೃಗಾಲಯವು ಗಂಭೀರವಾದ ಆರ್ಥಿಕ ಮುಗ್ಗಟ್ಟಿನಲ್ಲಿದೆ. ಮೃಗಾಲಯದ ಉಳಿವಿಗೆ ಸಾರ್ವಜನಿಕ ದೇಣಿಗೆಯನ್ನು ಪದಾಧಿಕಾರಿಗಳು ಕೋರಿದ್ದಾರೆ.