ವಯಸ್ಕ ಜಿಮ್ನಾಸ್ಟ್ಗಳು 70 ಕೆಜಿ ತೂಕದ ಭಾರವನ್ನ ಹೊರುವುದು ಸಾಮಾನ್ಯ ಸಂಗತಿ. ಅಥವಾ ಅದಕ್ಕಿಂತ ಹೆಚ್ಚಿನ ತೂಕವನ್ನ ಹೊರಲು ಶಕ್ತರಾಗಿದ್ದರೂ ಸಹ ಆಶ್ಚರ್ಯ ಪಡಬೇಕಾಗಿಲ್ಲ. ಆದರೆ 7 ವರ್ಷದ ಬಾಲಕಿ ಈ ಕೆಲಸವನ್ನ ಅತ್ಯಂತ ಸರಳವಾಗಿ ಮಾಡುತ್ತಾಳೆ ಅಂದರೆ..? ಇದು ಆಶ್ಚರ್ಯದ ವಿಚಾರವೇ ಸರಿ.
ಕೆನಡಾದ ಲಿಟಲ್ ರೋರಿ ವ್ಯಾನ್ ಉಲ್ಟ್ ಇಂತಹದ್ದೊಂದು ವಿಶೇಷ ಸಾಧನೆ ಮಾಡಿದ ಬಾಲಕಿ ಎನಿಸಿಕೊಂಡಿದ್ದಾಳೆ. 80 ಕೆಜಿ ತೂಕವನ್ನ ಹೊರುವ ಸಾಮರ್ಥ್ಯ ಹೊಂದಿದ್ದಾಳೆ.
ಕೇವಲ 4 ಅಡಿ ಎತ್ತರವಿರುವ ಈ ಪುಟಾಣಿ ಪೋರಿ 2 ವರ್ಷಗಳ ಹಿಂದೆ ಅಂದರೆ ತನ್ನ 5ನೇ ವರ್ಷದ ಜನ್ಮದಿನದಂದು ತೂಕ ಹೊರುವ ತರಬೇತಿ ಆರಂಭಿಸಿದಳು. ಈಕೆ 11 ಹಾಗು 13 ವರ್ಷದೊಳಗಿನವರಿಗೆ ಅಮೆರಿಕದಲ್ಲಿ ಆಯೋಜಿಸಲಾಗಿದ್ದ ಭಾರ ಎತ್ತುವ ಸ್ಪರ್ಧೆಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾಳೆ. ಕೆನಡಾದಲ್ಲಿ ಬಾಲ ವೇಟ್ಲಿಫ್ಟರ್ಗಳಿಗೆ ಯಾವುದೇ ಸ್ಪರ್ಧೆ ಇಲ್ಲದ ಕಾರಣ ಈಕೆ ಅಮೆರಿಕದ ಸ್ಪರ್ಧೆಗಳಲ್ಲಿ ಭಾಗಿಯಾಗುತ್ತಿದ್ದಾಳೆ.