
ಈ ಮಕ್ಕಳು ಎಷ್ಟು ಮುದ್ದಾಗಿರುತ್ತವೋ ಅಷ್ಟೇ ಮೊಂಡೂ ಹೌದು. ಅವಕ್ಕೆ ಏನನ್ನಾದ್ರೂ ಮಾಡಬೇಡಿ ಅಂತ ಹೇಳಿದಷ್ಟೂ ಅದನ್ನೇ ಮಾಡಲು ನೋಡುತ್ತವೆ.
ಟ್ವಿಟ್ಟರ್ ಬಳಕೆದಾರರೊಬ್ಬರು ತಮ್ಮ ಮಗಳ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲೇನು ವಿಶೇಷ ಎಂದಿರಾ? ನೋಡಿದ ಕೂಡಲೇ ಬೆಚ್ಚಿ ಬೀಳುವ ಮಾಸ್ಕ್ ಒಂದನ್ನು ಮುಖಕ್ಕೆ ಹಾಕಿಕೊಂಡು ಮೂರು ಗಂಟೆಗಳಿಂದಲೂ ಟಿವಿ ಮುಂದೆ ಕೂತಿರುವ ಈ ಪುಟ್ಟ ಹುಡುಗಿ ತನ್ನ ಅಮ್ಮನ ಮಾತಿಗೆ ಕ್ಯಾರೇ ಅನ್ನದೆ ಹಾಗೇ ಕುಳಿತಿದ್ದಾಳೆ.
ಈ ವಿಡಿಯೋ ಈಗ ಮೈಕ್ರೋಬ್ಲಾಗಿಂಗ್ ಪ್ಲಾಟ್ ಫಾರಂನಲ್ಲಿ ವೈರಲ್ ಆಗಿದ್ದು, 8.8 ದಶಲಕ್ಷಕ್ಕೂ ಹೆಚ್ಚು ವೀವ್ಸ್‌ಗಳನ್ನು ಗಿಟ್ಟಿಸಿಕೊಂಡು, 7.8 ಲಕ್ಷಕ್ಕೂ ಹೆಚ್ಚು ಲೈಕ್ಸ್ ಗಳಿಸಿಕೊಂಡಿದೆ.