
ಕೊರೊನಾ ಎಲ್ಲೆಡೆ ಬಿಗುವಾದ ವಾತಾವರಣ ಸೃಷ್ಟಿಸಿದೆ. ಹೊರಗೆ ಹೋಗುವಂತಿಲ್ಲ. ಹೋದರೂ ಮಾಸ್ಕ್ ಹಾಕಿಕೊಂಡಿರಬೇಕು. ಮನಬಿಚ್ಚಿ ನಗಲು, ಆತ್ಮೀಯರೊಂದಿಗೆ ಮಾತನಾಡಲೂ, ಶೇಕ್ ಹ್ಯಾಂಡ್ ಮಾಡಿ ಖುಷಿ ಪಡಲೂ ಕೊರೊನಾ ಕಂಟಕ ತಂದಿಟ್ಟಿದೆ. ಇಂಥ ಕಾಲಘಟ್ಟದಲ್ಲಿ ತಂದೆ, ಮಗಳ ಮನೆಯಲ್ಲಿನ ಸಂಗೀತವೊಂದು ನಿಮ್ಮನ್ನು ಖುಷಿಪಡಿಸಲಿದೆ.
ಸಿಮೋನ್ ಬಿಆರ್ ಎಫ್ ಸಿ ಹಾಪ್ಕಿನ್ಸ್ ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋ ಅಪ್ ಲೋಡ್ ಆಗಿದೆ. “ಎರಡು ನಿಮಿಷ ಬಿಡುವು ಮಾಡಿಕೊಂಡು ಈ ವಿಡಿಯೋ ನೋಡಿ. ನಿಮಗೆ ಖಂಡಿತ ಖುಷಿಯಾಗುತ್ತದೆ” ಎಂದು ಕ್ಯಾಪ್ಶನ್ ನೀಡಲಾಗಿದೆ. ವಿಡಿಯೋವನ್ನು ಸಾವಿರಾರು ಜನ ನೋಡಿ ಇಷ್ಟಪಟ್ಟಿದ್ದಾರೆ.
ವಿಡಿಯೋದಲ್ಲಿ ತಂದೆ ಗಿಟಾರ್ ಹಿಡಿದು ಕುಳಿತಿದ್ದಾನೆ. ಮಗಳು “ಯು ಹ್ಯಾವ್ ಗಾಟ್ ಎ ಫ್ರೆಂಡ್ ಇನ್ ಮೀ” ಎಂಬ ಹಾಡು ಹಾಡುತ್ತಾಳೆ. ಹಲವರು ವಿಡಿಯೋ ಇಷ್ಟ ಪಟ್ಟು ಕಮೆಂಟ್ ಮಾಡಿದ್ದಾರೆ. ” ನಿಜವಾದ ನಗುವನ್ನು ನೋಡಿದೆ” ಎಂದು ಒಬ್ಬರು, “ಇದಕ್ಕೆ ಗೋಲ್ಡ್ ಮೆಡಲ್ ನೀಡಬೇಕು” ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
https://twitter.com/HopkinsBRFC/status/1309481476703084546?ref_src=twsrc%5Etfw%7Ctwcamp%5Etweetembed%7Ctwterm%5E1309481476703084546%7Ctwgr%5Eshare_3&ref_url=https%3A%2F%2Fwww.indiatoday.in%2Ftrending-news%2Fstory%2Flittle-girl-sings-with-her-father-in-beautiful-home-concert-internet-hearts-adorable-video-1725581-2020-09-26