ಈ ಕೊರೋನಾ ಕಾಲದಲ್ಲಿ ಯಾರೂ ಮನೆಯಿಂದ ಹೊರಬರುವ ಮಾತೇ ಇಲ್ಲ. ಬಂದರೂ ತೀರಾ ಅಗತ್ಯಕ್ಕಷ್ಟೇ ಬರುವಂತಾಗಿದೆ. ಹೀಗಾಗಿ ಮನೆಯಲ್ಲೇ ಇದ್ದು, ಆರೋಗ್ಯ ಕಾಪಾಡಿಕೊಳ್ಳಲು ಯೋಗ ಮುಂತಾದ ಚಟುವಟಿಕೆಯ ಮೊರೆ ಹೋಗಲಾಗುತ್ತಿದೆ.
ಆದರೆ, ಮನೆಯಲ್ಲಿ ಮಕ್ಕಳಿದ್ದರೆ ಯಾವ ರೀತಿ ಯೋಗ ಮಾಡಿದಂತಾಗುತ್ತದೆ ಎಂಬ ಅಮ್ಮ-ಮಗಳ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಯೋಗ ಶಿಕ್ಷಕಿ ರಚೆಲ್ ಬಾರ್ದೆನ್ ಎಂಬುವವರು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಯೋಗ ಮಾಡುವ ವಿಡಿಯೋವನ್ನು ಅಪ್ಲೋಡ್ ಮಾಡಿದ್ದು, ಹೀಗೆ ಬರೆದುಕೊಂಡಿದ್ದಾರೆ. “ಧ್ಯಾನ, ಅವರು ಹೇಳುತ್ತಾರೆ…..ಇದು ತುಂಬಾ ಪ್ರಶಾಂತತೆಯನ್ನು ನೀಡುತ್ತದೆ, ಅವರು ಹೇಳುತ್ತಾರೆ…’’ ಎಂದಷ್ಟೇ ಬರೆದುಕೊಂಡಿದ್ದಾರೆ.
ಇಲ್ಲಿ ಅಮ್ಮ ಧ್ಯಾನದ ಭಂಗಿಯಲ್ಲಿ ಯೋಗ ಮಾಡುತ್ತಿರುವಾಗ ಪುಟ್ಟ ಮಗಳು ಆಕೆಯ ಬೆನ್ನಿಗೆ ಜೋತುಬೀಳುತ್ತಾಳೆ, ಅಲ್ಲಿಂದ ಸೀದಾ ಅಮ್ಮನ ತೊಡೆಯ ಮೇಲೆ ಎರಗುತ್ತಾಳೆ. ಇಷ್ಟಾದರೂ ಅಮ್ಮ ಏನೂ ಪ್ರತಿಕ್ರಿಯೆ ಕೊಡದೇ ಯೋಗ ಮಾಡುತ್ತಿರುತ್ತಾರೆ. ಕೊನೆಗೆ ಆಕೆಯ ಮುಖದ ಮೇಲೆ ಹೆಸರನ್ನು ಬರೆಯುವಂತೆ ಮಾಡಿ ಅಮ್ಮನನ್ನು ನಗಿಸುತ್ತಾಳೆ. ಈ ವಿಡಿಯೋ ಈಗ ಇನ್ ಸ್ಟಾಗ್ರಾಂನಲ್ಲಿ ಭರ್ಜರಿ ಸದ್ದು ಮಾಡಿದೆ. ಈಗಾಗಲೇ 1.8 ಲಕ್ಷ ವೀಕ್ಷಣೆಯನ್ನು ಕಂಡಿದ್ದು, ಸಾವಿರಾರು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ.
https://www.instagram.com/p/CCOHEqdBlSX/?utm_source=ig_embed