ಮಕ್ಕಳಿಗೆ ನಾಯಿ ಮರಿಗಳು, ಬೆಕ್ಕಿನ ಮರಿಗಳು ಎಂದರೆ ಎಷ್ಟು ಪ್ರೀತಿ ಎಂಬುದುನ್ನು ನಾವೆಲ್ಲಾ ನಮ್ಮನಮ್ಮ ಮನೆಗಳಲ್ಲೇ ಬಹಳಷ್ಟು ಬಾರಿ ನೋಡಿದ್ದೇವೆ.
ಪುಟಾಣಿ ಬಾಲಕಿಯೊಬ್ಬಳು ತನ್ನ ಹುಟ್ಟುಹಬ್ಬಕ್ಕೆಂದು ಬಂದ ಉಡುಗೊರೆಯಲ್ಲಿ ನಾಯಿಮರಿಯನ್ನು ಕಂಡಾಗ ಆಕೆ ಮೊಗದಲ್ಲಿ ಅರಳಿದ ಭಾವಪರವಶತೆಯ ವಿಡಿಯೋವೊಂದು ರೆಡ್ಡಿಟ್‌ನಲ್ಲಿ ಪೋಸ್ಟ್ ಆಗಿದ್ದು, ನೆಟ್ಟಿಗರು ಇದನ್ನು ವೀಕ್ಷಿಸಿ ಎಂಜಾಯ್ ಮಾಡಿದ್ದಾರೆ.
ಬಾಲಕಿಯ ತಾಯಿ ಆಕೆಯನ್ನು ಲಿವಿಂಗ್ ರೂಂಗೆ ಕರೆದು ಕಾರ್ಡ್‌ಬೋರ್ಡ್ ಬಾಕ್ಸೊಂದನ್ನು ಕೊಟ್ಟು, “ನಿನ್ನ ಹುಟ್ಟುಹಬ್ಬದ ಉಡೊಗೊರೆಯೊಂದನ್ನು ತೆರೆದುನೋಡಲು ಇಚ್ಛಿಸುವೆಯಾ?” ಎಂದಾಗ ಭಾರೀ ಉತ್ಸಾಹದಲ್ಲಿ ’ಎಸ್’ ಎಂದ ಬಾಲಕಿ ಅದನ್ನು ತೆರೆದು ನೋಡಿದ ಘಳಿಗೆ ನಾಯಿಮರಿಯನ್ನು ಕಂಡಾಗ ಆಕೆಯ ಖುಷಿಗೆ ಪಾರವೇ ಇರಲಿಲ್ಲ.
ಬಾಲಕಿಯ ಮೊಗದಲ್ಲಿ ಅರಳಿದ ಮಂದಸ್ಮಿತವನ್ನು ಈ ವಿಡಿಯೋದಲ್ಲಿ ನೀವೇ ನೋಡಿ ಆನಂದಿಸಿ.
https://youtu.be/K_kds5H1vhc