ಸೆಲೆಬ್ರಲ್ ಪಾಲ್ಸಿಯಿಂದ ಬಳಲುತ್ತಿರುವವರಿಗೆ ನಡೆದಾಡುವುದೇ ದೊಡ್ಡ ಸಮಸ್ಯೆ. ಅವರಿಗೆ ನಡೆದಾಡುವುದನ್ನು ಕಲಿಸುವುದೇ ಒಂದು ಸವಾಲು. ಆದರೆ ಒಬ್ಬ ಬಾಲಕಿ ಮೊದಲ ಬಾರಿಗೆ ಮೆಟ್ಟಿಲುಗಳನ್ನು ಹತ್ತಿ ಸಂಭ್ರಮಿಸಿದ ವಿಡಿಯೋ ಇದೀಗ ವೈರಲ್ ಆಗಿದೆ.
ರೆಕ್ಸ್ ಚಾಪ್ಮ್ಯಾನ್ ಎನ್ನುವವರು ವಿಡಿಯೋ ಒಂದನ್ನು ಶೇರ್ ಮಾಡಿದ್ದು, ಇದರಲ್ಲಿ ಸೆಲೆಬ್ರಲ್ ಪಾಲ್ಸಿಯಿಂದ ಬಳಲುತ್ತಿರುವ ಬಾಲಕಿ ಒಂದೊಂದೇ ಮೆಟ್ಟಿಲುಗಳನ್ನು ಪಕ್ಕದಲ್ಲಿರುವ ಕಂಬಿಯ ಸಹಾಯವನ್ನು ಪಡೆದು ಹತ್ತುತ್ತಿರುವ ಹಾಗೂ ಹತ್ತಿದ ಬಳಿಕ ಆಕೆಯ ಮೊಗದಲ್ಲಿ ಕಾಣಿಸಿಕೊಂಡ ಸಂಭ್ರಮದ ವಿಡಿಯೋ ಇದೀಗ ವೈರಲ್ ಆಗಿದೆ.
ಇದೊಂದು ಅದ್ಭುತ ವಿಡಿಯೋ ಎಂದು ಬಣ್ಣಿಸಿರುವ ಅವರು, ಬಾಲಕಿಯ ಧೈರ್ಯವನ್ನು ಮೆಚ್ಚಿದ್ದಾರೆ. ಈ ವಿಡಿಯೋವನ್ನು ಹಾಕುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಸುಮಾರು 1.72 ಲಕ್ಷ ಮಂದಿ ಲೈಕ್ ಮಾಡಿದ್ದು, 22 ಸಾವಿರಕ್ಕೂ ಹೆಚ್ಚು ಮಂದಿ ಕಾಮೆಂಟ್ ಮಾಡಿದ್ದಾರೆ. ಇನ್ನು ಈ ವಿಡಿಯೋವನ್ನು ಸುಮಾರು 7ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ನೆಟ್ಟಿಗರು ಈ ಬಾಲಕಿಯ ಆತ್ಮವಿಶ್ವಾಸವನ್ನು ಮೆಚ್ಚಿದ್ದಾರೆ.
https://twitter.com/MTM91324/status/1292265389146038274?ref_src=twsrc%5Etfw%7Ctwcamp%5Etweetembed%7Ctwterm%5E1292265389146038274%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Flittle-champion-girl-with-cerebral-palsy-walks-up-stairs-for-the-first-time-her-smile-wins-hearts-watch%2F634126