ಅಮ್ಮ ಕೊಟ್ಟ ನೂರು ರೂ. ನೋಟಿನೊಂದಿಗೆ ಶಾಲೆಗೆ ತೆರಳಿದ ಬಾಲಕ 150 ರೂ. ಹಾಗೂ ನಾಲ್ಕು ಕೋಳಿ ಮರಿಯೊಂದಿಗೆ ವಾಪಸ್ ಬಂದ. ಅಷ್ಟಕ್ಕೂ ಎಲ್ಲರಿಗೂ ಅಚ್ಚರಿಯಾಗುವಂತೆ ಬಾಲಕ ಮಾಡಿದ್ದೇನು..?
ಬಾಲಕನ ಸೋದರಿ ಮಲಾನಾ ಎಂಬುವವರು ಸರಣಿ ಟ್ವೀಟ್ ಮಾಡುವ ಮೂಲಕ ಬಾಲಕ ಕೋಳಿ ಮರಿ ತಂದ ಕೌತುಕದ ಕತೆ ಹೇಳಿದ್ದಾರೆ. ಅವರ ಕತೆಗೆ ನೆಟ್ಟಿಗರು ಹರ್ಷ ವ್ಯಕ್ತಪಡಿಸಿದ್ದಾರೆ.
1 ನೇ ತರಗತಿ ಬಾಲಕನಿಗೆ ಶಾಲೆಯ ಮೊದಲ ದಿನ ತೆರಳುವಾಗ ಆತನ ಅಮ್ಮ 100 ರೂ. ನೀಡಿದ್ದರು. ಆತ ಹೋಗುವ ಮಾರ್ಗದಲ್ಲಿ ವ್ಯಕ್ತಿಯೊಬ್ಬ ಸೈಕಲ್ ನಲ್ಲಿ 25 ರೂ.ಗೆ ಒಂದರಂತೆ ಕೋಳಿ ಮರಿಗಳನ್ನು ಮಾರುತ್ತಿದ್ದ. ಇತರ ಬಾಲಕರೆಲ್ಲ ಸುತ್ತುಗಟ್ಟಿ ಅದನ್ನು ಕೊಳ್ಳುತ್ತಿದ್ದರು.
ಆದರೆ, ಆ ಸಂದರ್ಭದಲ್ಲಿ ಕೆಲವು ಮರಿಗಳು ಮಾರಾಟಗಾರನ ಕೈ ತಪ್ಪಿಸಿಕೊಂಡು ಓಡಿ ಹೋದವು. ಇತರೆ ಬಾಲಕರು ಅದನ್ನು ಹಿಡಿಯಲು ಹೆದರಿದರು. ಆದರೆ, ಈತ ಮಾತ್ರ ಎಲ್ಲವನ್ನೂ ಹಿಡಿದು ಬ್ಯಾಗ್ ನಲ್ಲಿ ತುಂಬಿ ಕೊಟ್ಟ. ಆ ಸಂದರ್ಭದಲ್ಲಿ ಆತನ ಹೋಂ ವರ್ಕ್ ಬುಕ್ ಕೂಡ ಹಾಳಾಯಿತು ಎಂದು ಬಾಲಕನ ಸಹೋದರಿ ಬರೆದಿದ್ದಾಳೆ.
ಮರಿಗಳ ಬಗ್ಗೆ ಬಾಲಕನ ಕಾಳಜಿ, ಪ್ರೀತಿ ನೋಡಿ ವ್ಯಾಪಾರಸ್ಥ ಆತನಿಗೆ ನಾಲ್ಕು ಕೋಳಿ ಮರಿಗಳ ಜತೆ 50 ರೂ.ಗಳನ್ನೂ ಬಹುಮಾನವಾಗಿ ನೀಡಿ ಕಳುಹಿಸಿದ್ದ ಎಂದು ವಿವರಿಸಿದ್ದಾಳೆ.
https://twitter.com/maulana_banana/status/1311006817108058112?ref_src=twsrc%5Etfw%7Ctwcamp%5Etweetembed%7Ctwterm%5E1311006817108058112%7Ctwgr%5Eshare_3&ref_url=https%3A%2F%2Findianexpress.com%2Farticle%2Ftrending%2Ftrending-in-india%2Flittle-boy-goes-to-school-with-rs-100-comes-back-with-four-chicks-and-more-money-6663147%2F
https://twitter.com/maulana_banana/status/1311012834369732620?ref_src=twsrc%5Etfw%7Ctwcamp%5Etweetembed%7Ctwterm%5E1311012834369732620%7Ctwgr%5Eshare_3&ref_url=https%3A%2F%2Findianexpress.com%2Farticle%2Ftrending%2Ftrending-in-india%2Flittle-boy-goes-to-school-with-rs-100-comes-back-with-four-chicks-and-more-money-6663147%2F
https://twitter.com/maulana_banana/status/1311015225320185856?ref_src=twsrc%5Etfw%7Ctwcamp%5Etweetembed%7Ctwterm%5E1311015225320185856%7Ctwgr%5Eshare_2&ref_url=https%3A%2F%2Findianexpress.com%2Farticle%2Ftrending%2Ftrending-in-india%2Flittle-boy-goes-to-school-with-rs-100-comes-back-with-four-chicks-and-more-money-6663147%2F