ಕೊರೋನಾ ಲಾಕ್‌ಡೌನ್‌ನಿಂದ ಎಲ್ಲವೂ ಆನ್‌ಲೈನ್ ಮಯವಾಗಿದೆ. ಇದೀಗ ಅತಿವೇಗವಾಗಿ ತೆವಳುವ ಕಂದಮ್ಮಗಳ ಸ್ಪರ್ಧೆಯೂ ಆನ್‌ಲೈನ್‌ನಲ್ಲಿಯೇ ನಡೆದಿದ್ದು, ವಿಡಿಯೊ ವೈರಲ್ ಆಗಿದೆ.
ಕೆಲ ದಿನಗಳ ಹಿಂದೆ ನಡೆದ ಈ ಆನ್‌ಲೈನ್ ಸ್ಪರ್ಧೆಯಲ್ಲಿ ಲಿಥುವೇನಿಯಾದ ಒಲಿವಿಜಾ ಎನ್ನುವ 9 ತಿಂಗಳ ಕೂಸು, ಐದು ಮೀಟರ್ ಅಂತರವನ್ನು ಕ್ರಮಿಸಲು ಕೇವಲ 13 ಸೆಕೆಂಡ್ ತೆಗೆದುಕೊಳ್ಳುವ ಮೂಲಕ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾಳೆ. ಈ ಆನ್‌ಲೈನ್ ಸ್ಪರ್ಧೆಯಲ್ಲಿ ಒಟ್ಟು 13 ಮಕ್ಕಳು ಭಾಗವಹಿಸಿದ್ದರು. 14ನೇ ಮಗು ತೆವಳುವಾಗಲೇ ಮಲಗಿತ್ತು ಎಂದು ಹೇಳಲಾಗಿದೆ.
ಫೇಸ್‌ಬುಕ್ ಲೈವ್‌ನಲ್ಲಿ ನಡೆದ ಈ ಸ್ಪರ್ಧೆಯನ್ನು ಮಕ್ಕಳ ಪೋಷಕರ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಲಾಗಿತ್ತು. ಒಲಿವಿಜಾ ಪೋಷಕರ ಪ್ರಕಾರ, ಸಹಜವಾಗಿ ಜೋರಾಗಿ ತೆವಳುವ ತಮ್ಮ ಪುತ್ರಿ ಈ ಸ್ಪರ್ಧೆಯಲ್ಲಿ ಗೆಲ್ಲುವ ವಿಶ್ವಾಸವಿತ್ತಂತೆ. ಆಕೆಯೊಂದಿಗೆ ಮೂವರು ಮಕ್ಕಳು ಭಾಗವಹಿಸಿದ್ದರು ಎನ್ನಲಾಗಿದೆ.
ಕೆಲ ಪೋಷಕರು ಆನ್‌ಲೈನ್ ಸ್ಪರ್ಧೆ ಆರಂಭಿಸುವುದಕ್ಕೂ ಮೊದಲು ತಮ್ಮ ಮಕ್ಕಳನ್ನು ಹೊರಗಡೆ ಕೂರಿಸಿಕೊಂಡು ಜೋರಾಗಿ ತೆವಳುವ ವಿವಿಧ ತಂತ್ರವನ್ನು ಹೇಳಿಕೊಡುತ್ತಿದ್ದರಂತೆ. ಆದರೆ ಆ ಮಕ್ಕಳಿಗೆ ಇದು ಎಷ್ಟರ ಮಟ್ಟಿಗೆ ಅರ್ಥವಾಗಿದೆ ಎನ್ನುವುದು ದೇವರಿಗೆ ಗೊತ್ತು. ಇದೀಗ ಈ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.