ಹಣ ಮಾಡಲು ಈತ ಮರಿ ಸಿಂಹ ಸಿಂಬನ ಕಾಲನ್ನೇ ಮುರಿದ, ಕೊಟ್ಟಿಗೆಗಿಂತ ಕಡೆಯಾದ ಕೋಣೆಯಲ್ಲಿ ಕೂಡಿಟ್ಟ, ಕೊರೆಯುವ ತಣ್ಣೀರು ಸುರಿದು ಹಿಂಸಿಸಿದ…..
ಇಷ್ಟೆಲ್ಲ ಆದರೂ ಛಲ ಬಿಡದ ತ್ರಿವಿಕ್ರಮನಂತಾಗಿರುವ ಪುಟ್ಟ ಸಿಂಬ, ಮುರಿದ ತನ್ನ ಕಾಲುಗಳನ್ನು ಸರಿಪಡಿಸಿಕೊಂಡು ಒಂದೊಂದೇ ಹೆಜ್ಜೆ ಇಡಲು ಶುರು ಮಾಡಿದ್ದಾನೆ.
ರಷ್ಯಾದಲ್ಲಿ ಹುಟ್ಟಿದ ಕೆಲವೇ ವಾರದಲ್ಲಿ ತಾಯಿಯಿಂದ ಬೇರ್ಪಟ್ಟ ಸಿಂಬನನ್ನು ಕದ್ದೊಯ್ದಿದ್ದ ವ್ಯಕ್ತಿಯೊಬ್ಬ, ಚಿತ್ರಹಿಂಸೆ ಕೊಟ್ಟು ಬೆಳೆಸಿದ್ದಾನೆ.
ಸಾಲದ್ದಕ್ಕೆ ಬೀಚ್ಗೆ ಬರುವ ಪ್ರವಾಸಿಗರ ಎದುರು ಸಿಂಬನನ್ನ ತೋರಿಸಿ, ಆತನ ಜೊತೆ ಫೋಟೋ ತೆಗೆಸಿಕೊಂಡರೆ ಇಂತಿಷ್ಟು ಹಣ ಎಂದು ನಿಗದಿಪಡಿಸಿ, ದುಡ್ಡು ಮಾಡಿಕೊಳ್ಳುತ್ತಿದ್ದ.
ಮುದ್ದಾದ ಸಿಂಬನ ಜತೆ ಫೋಟೋ ತೆಗೆಸಿಕೊಂಡು ಖುಷಿಪಟ್ಟು, ದುಡ್ಡು ಕೊಟ್ಟು ಹೋಗುತ್ತಿದ್ದ ಪ್ರವಾಸಿಗರು ಕೂಡ ಸಿಂಬನ ದುಃಸ್ಥಿತಿ ಬಗ್ಗೆ ಕೇಳುತ್ತಿರಲಿಲ್ಲ. ಆದರೆ, ಬೀಚ್ ಸುತ್ತಮುತ್ತಲ ಜನರ ಮಾಹಿತಿ ಆಧರಿಸಿ, ಸಿಂಬನ ರಕ್ಷಣೆಗೆ ನಿಂತ ಯುಲಿಯಾ ಅಗೀವಾ ಎಂಬಾತ, ಸಿಂಬನನ್ನು ನರಕಕೂಪದಿಂದ ಬಿಡಿಸಿಕೊಂಡು ಬಂದು, ಚಿಕಿತ್ಸೆ ಕೊಡಿಸಿದ್ದಾರೆ. ಇದೀಗ ಸಿಂಬ ಸ್ವಚ್ಛಂದವಾಗಿ ಓಡಾಡಿಕೊಂಡಿದ್ದಾನೆ.
ಸಿಂಬನ ಈ ದುಃಸ್ಥಿತಿಗೆ ಕಾರಣನಾದವನನ್ನು ಹಿಡಿಯಬೇಕು ಹಾಗೂ ಇಡೀ ಪ್ರಕರಣದ ತನಿಖೆ ನಡೆಸಬೇಕೆಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೂಡ ಆದೇಶಿಸಿದ್ದಾರೆ. ಅಂದ ಹಾಗೆ ಈ ಸಿಂಬ ಯಾರು ? ಈಗ ಹೇಗಿದ್ದಾನೆ ತಿಳಿಯಬೇಕೆ ? ಈ ವಿಡಿಯೋ ನೋಡಿ, ಗೊತ್ತಾಗುತ್ತದೆ.
https://www.instagram.com/tv/B_cPVa0IjP7/?utm_source=ig_embed
https://www.instagram.com/p/B_gzyh_och9/?utm_source=ig_embed