alex Certify ಖುಷಿ ಹೆಚ್ಚಾಗಿ ’ಝೂಮೀಸ್’ ಹಾಕಿದ ಶ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖುಷಿ ಹೆಚ್ಚಾಗಿ ’ಝೂಮೀಸ್’ ಹಾಕಿದ ಶ್ವಾನ

ಮನೆಯ ತುಂಬೆಲ್ಲಾ ಓಡಾಡಿಕೊಂಡು ’ಝೂಮೀಸ್‌’ಗಳನ್ನು ಮಾಡುತ್ತಿರುವ ಲ್ಯಾಬ್ರಡಾರ್‌ ಶ್ವಾನವೊಂದರ ವಿಡಿಯೋ ರೆಡ್ಡಿಟ್‌‌ನಲ್ಲಿ ಬಹಳ ವೈರಲ್ ಆಗಿದೆ. ವೃತ್ತಾಕಾರದ ಪಥದಲ್ಲಿ ಸುಮ್ಮನೇ ಒಂದೇ ಸಮನೆ ಗಿರಕಿ ಹೊಡೆಯುತ್ತಿರುವ ಶ್ವಾನವು ’ಬೇಬ್ಲೇಡ್‌’ ಸೀರೀಸ್‌ ನೆನಪಿಸುವಂತಿದೆ.

ಈ ಲ್ಯಾಬ್‌ ನಾಯಿಯು ಹೀಗೆ ಅತಿ ಉತ್ಸಾಹದಿಂದ ಕುಣಿದಾಡುತ್ತಿದ್ದರೆ, ಅದೇ ಮನೆಯಲ್ಲಿದ್ದ ಮತ್ತೊಂದು ನಾಯಿಯು ತನ್ನ ಪಾಡಿಗೆ ಸುಮ್ಮನೇ ಕೂತು ಸಹೋದರ ಮಾಡುತ್ತಿರುವ ಆಕ್ಷನ್‌ ನೋಡುತ್ತಿದ್ದಾನೆ.

ಈ ಮಿಲೀನಿಯಲ್‌ಗಳ ಭಾಷೆಯಲ್ಲಿ ’ಝೂಮೀಸ್’ ಎಂದರೆ, ಬಹಳ ವೇಗವಾಗಿ ಶ್ವಾನಗಳು ವೃತ್ತಾಕಾರದಲ್ಲಿ ಸುತ್ತು ಹಾಕುವುದು ಎಂದರ್ಥ. 2000ದ ದಶಕದ ಪ್ರಾರಂಭದಲ್ಲಿ ಜಪಾನ್‌ನಲ್ಲಿ ಬಹಳ ಖ್ಯಾತವಾಗಿದ್ದ ಬುಗುರಿಗಳು ಈ ’ಬೇಬ್ಲೇಡ್‌’ಗಳು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...