ಮಕ್ಕಳು ಆಟವಾಡ್ತಾ ಮೂಗು, ಬಾಯಿಗೆ ವಸ್ತುಗಳನ್ನು ಹಾಕಿಕೊಳ್ತಾರೆ. ಎರಡು ವರ್ಷಗಳ ಹಿಂದೆ ಮೂಗಿನೊಳಗೆ ಹೋಗಿದ್ದ ವಸ್ತು ಈಗ ಹೊರಬಂದ ಘಟನೆ ನ್ಯೂಜಿಲ್ಯಾಂಡ್ ನಲ್ಲಿ ನಡೆದಿದೆ. ಅಚ್ಚರಿಯೆಂದ್ರೆ ಮೂಗಿನಲ್ಲಿದ್ದ ವಸ್ತುವನ್ನು ವೈದ್ಯರಿಗೂ ಪತ್ತೆ ಮಾಡಲು ಆಗಿರಲಿಲ್ಲ.
2018ರಲ್ಲಿ ಐದು ವರ್ಷದ ಬಾಲಕ ಸಮೀರ್ ಮೂಗಿಗೆ ಲೆಗೊ ತುಂಡನ್ನು ಹಾಕಿಕೊಂಡಿದ್ದನಂತೆ. ತಕ್ಷಣ ತಂದೆ ಇದನ್ನು ತೆಗೆಯುವ ಯತ್ನ ಮಾಡಿದ್ದನಂತೆ. ವೈದ್ಯರ ಬಳಿ ಕೂಡ ಆಟಿಕೆಯನ್ನು ಪತ್ತೆ ಹಚ್ಚಲು ಆಗಿರಲಿಲ್ಲ. ಆಹಾರದ ಪೈಪ್ ಮೂಲಕ ಅದು ಹೊರ ಬರುತ್ತದೆ ಎಂದು ವೈದ್ಯರು ಹೇಳಿದ್ದರಂತೆ.
ಮೂಗಿನಲ್ಲಿ ಯಾವುದೇ ನೋವು ಕಾಣದ ಕಾರಣ ಪಾಲಕರು ಈ ವಿಷ್ಯವನ್ನು ಮರೆತಿದ್ದರಂತೆ. ಆಗಸ್ಟ್ 16ರಂದು ಗುಲಾಬಿ ಕಪ್ ಕೇಕ್ ತಿನ್ನಲು ಸಮೀರ್ ಬಗ್ಗಿದ್ದಾನೆ. ಆಗ ಮೂಗಿನಲ್ಲಿ ನೋವು ಕಾಣಿಸಿಕೊಂಡಿದೆ. ತಂದೆ-ತಾಯಿ ಗಟ್ಟಿ ಉಸಿರು ಬಿಡುವಂತೆ ಹೇಳಿದ್ದಾರೆ. ಕಷ್ಟಪಟ್ಟು ಸಮೀರ್ ಸೀನಿದ್ದಾನೆ. ಆಗ ಮೂಗಿನಿಂದ ಲೆಗೊ ಪೀಸ್ ಹೊರಕ್ಕೆ ಬಂದಿದೆ.