![](https://kannadadunia.com/wp-content/uploads/2020/06/VIRAL_PRESS_LEECH_SLITHERS-3-of-11-1-1024x682.jpg)
ಮಳೆಗಾಲ ಆರಂಭವಾಗಿರುವುದರಿಂದ ಕೆರೆ ಕಟ್ಟೆಯಲ್ಲಿ ನೀರು ನಿಲ್ಲುವುದು ಸಹಜ. ಈ ನೀರಲ್ಲಿ ಈಜಾಡಲು ಅನೇಕರು ಹೋಗುತ್ತಾರೆ. ಆದರೆ ಹೋಗುವ ಮೊದಲು ಈ ಸ್ಟೋರಿ ಓದಿ.
ಕಾಂಬೋಡಿಯಾದಲ್ಲಿ ವ್ಯಕ್ತಿಯೊಬ್ಬ ಈಜಲು ಕೆರೆಗೆ ಹೋಗಿದ್ದಾಗ, ಗುಪ್ತಾಂಗದ ಮೂಲಕ ಮೂತ್ರಕೋಶಕ್ಕೆ ಜಿಗಣೆ ಸೇರಿಕೊಂಡಿದೆ. ಈ ರೀತಿ ಹೊಕ್ಕ ಜಿಗಣೆ ಮೂತ್ರಕೋಶದಿಂದ ಸುಮಾರು 500 ಮಿಲೀ ರಕ್ತವನ್ನು ಹೀರಿದೆ.
ಈ ರೀತಿ ರಕ್ತ ಹೀರಿದ್ದರಿಂದ ವ್ಯಕ್ತಿಗೆ ಭಾರಿ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಯಲ್ಲಿ ತೋರಿಸಿದ ವೇಳೆ ವೈದ್ಯರು ಸ್ಕಾನ್ ಮಾಡಿದಾಗ ಜಿಗಣೆ ರಕ್ತ ಹೀರುತ್ತಿರುವುದು ಗೊತ್ತಾಗಿದೆ. ಬಳಿಕ ಬೈ ಪೋಲಾರ್ ರೆಕ್ಟೋಸ್ಕೋಪ್ ಮೂಲಕ ಜಿಗಣೆಯನ್ನು ಮೊದಲು ಸಾಯಿಸಿ ಬಳಿಕ ಹೊರತೆಗೆದಿದ್ದಾರೆ.
ವೈದ್ಯರ ಪ್ರಕಾರ, ವ್ಯಕ್ತಿ ಈಜಲು ಹೋದಾಗ ಗುಪ್ತಾಂಗದ ಮೂಲಕ ವ್ಯಕ್ತಿಯ ದೇಹಕ್ಕೆ ಜಿಗಣೆ ಸೇರಿಕೊಂಡಿದೆ. ಬಳಿಕ ರಕ್ತ ಹೀರುವುದರೊಂದಿಗೆ ಆಂತರಿಕ ಅಂಗಾಂಗಗಳನ್ನು ಹಾಳುಮಾಡಿದೆ. ಆದ್ದರಿಂದ ಕೆರೆಯಲ್ಲಿ ಈಜಲು ಹೋಗುವ ಮೊದಲು ಎಚ್ಚರ ಎಂದು ವೈದ್ಯರು ಹೇಳಿದ್ದಾರೆ.