ಯೆಮೆನ್ ಸಿಟಿಯಲ್ಲಿ ಮಹಿಳೆಯರಿಗೆ ಪ್ರಾಶಸ್ತ್ಯವಾದ ವಿಶ್ರಾಂತಿ ತಾಣವಿಲ್ಲ ಎಂಬುದನ್ನ ತಿಳಿದ ಮಹಿಳೆಯೊಬ್ಬಳು ಮಹಿಳೆಯರಿಗಾಗಿ ಸ್ವಂತ ಕೆಫೆಯೊಂದನ್ನ ಆರಂಭಿಸಿದ್ದಾಳೆ.
ಈ ವಿಚಾರವಾಗಿ ಮಾತನಾಡಿದ ಯುಎಂ ಫೆರಸ್, ಯೆಮೆನ್ನಲ್ಲಿ ಮಹಿಳೆಯರಿಗೆ ಸೂಕ್ತ ಎನ್ನಿಸುವ ಯಾವುದೇ ತಾಣಗಳು ಇರಲಿಲ್ಲ. ಮಹಿಳೆಯರಿಗೆ ಮಾತ್ರ ಸೀಮಿತ ಎನ್ನುವಂತಹ ಸ್ಥಳಗಳೂ ಇರಲಿಲ್ಲ. ಹೀಗಾಗಿ ಸ್ತ್ರೀಯರಿಗೆ ಅನುಕೂಲವಾಗಲಿ ಅಂತಾ ನಾನು ಕಳೆದ ವರ್ಷದ ಏಪ್ರಿಲ್ನಲ್ಲಿ ಯೆಮೆನ್ ನಗರದ ಕೇಂದ್ರ ಭಾಗದಲ್ಲಿ ಈ ಕೆಫೆಯನ್ನ ಆರಂಭಿಸಿದೆ ಅಂತಾ ಹೇಳಿದ್ರು. ಇಲ್ಲಿ ಅನೇಕರಿಗೆ ಮಹಿಳೆಯರು ಮನೆಯಿಂದ ಹೊರಹೋಗಿ ಕೆಲಸ ಮಾಡುವುದು ತಪ್ಪು ಅನ್ನೋ ಮನೋಭಾವವಿದೆ. ಅಂತವರಿಗೆ ನನ್ನ ಈ ಕೆಫೆ ವಿಚಿತ್ರ ಎನಿಸುತ್ತೆ ಅಂತಾನೂ ಹೇಳಿದ್ರು.
ಆದರೆ ನನ್ನ ಕೆಫೆ ಅನೇಕರಿಗೆ ತಪ್ಪು ಎಂದು ಎನಿಸಿರಬಹುದು. ಆದರೆ ಪ್ರತಿ ಹೊಸ ಯೋಜನೆಗೂ ಬೆಂಬಲಿಗರು ಹಾಗೂ ವಿರೋಧಿ ಬಣದವರು ಇದ್ದೇ ಇರ್ತಾರೆ. ನಾನು ಈ ಕೆಫೆಯನ್ನ ಆರಂಭಿಸುವ ಮೂಲಕ ಮಹಿಳೆಯರಿಗೆ ವಿಶ್ರಾಂತಿ ಸ್ಥಳಕ್ಕೆ ಜಾಗ ಮಾಡಿಕೊಟ್ಟಿದ್ದು ಮಾತ್ರವಲ್ಲದೇ ಸ್ತ್ರೀ ಒಬ್ಬ ಉದ್ಯಮಿಯೂ ಆಗಬಲ್ಲಳು ಎಂಬುದನ್ನ ತೋರಿಸಿದ್ದೇನೆ ಅಂತಾ ಹೆಮ್ಮೆಯಿಂದ ಹೇಳಿಕೊಳ್ತಾರೆ ಯುಎಂ ಫೆರಸ್.