ಕೊರೊನಾದಿಂದ ದೂರ ಇರಬೇಕು ಅಂದರೆ ಫೇಸ್ಮಾಸ್ಕ್ಗಳನ್ನ ಧರಿಸೋದು ಅನಿವಾರ್ಯ ಎಂಬಂತಾಗಿದೆ. ಹೀಗಾಗಿ ಜಾರ್ಜಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮಾಸ್ಕ್ಗಳ ಮೇಲೆಯೇ ಹೊಸ ಅಧ್ಯಯನವೊಂದನ್ನ ಮಾಡಿದ್ದು ಯಾವ ಬಟ್ಟೆಯ ಹಾಗೂ ಎಷ್ಟು ಪದರಗಳನ್ನ ಹೊಂದಿರುವ ಮಾಸ್ಕ್ಗಳನ್ನ ಬಳಕೆ ಮಾಡೋದು ಸೂಕ್ತ ಅನ್ನೋದನ್ನ ಹೇಳಿದೆ.
ಈ ಅಧ್ಯಯನದಲ್ಲಿ ಯಾವ್ಯಾವ ಬಟ್ಟೆಗಳು ಎಷ್ಟು ಮೈಕ್ರೋನ್ಸ್ ಗಾತ್ರದ ರಂಧ್ರವನ್ನ ಹೊಂದಿದೆ ಎಂಬುದನ್ನ ಹೇಳಿದೆ. ಮನುಷ್ಯನ ತಲೆಗೂದಲು 50 ಮೈಕ್ರೋನ್ಸ್ ವ್ಯಾಸ ಹೊಂದಿದೆ. 1 ಮಿಲಿಮೀಟರ್ ಅಂದರೆ 1000 ಮೈಕ್ರೋನ್ಸ್ ಎಂದು ಅರ್ಥ.
ಸಬ್ ಮೈಕ್ರಾನ್ ಗಾತ್ರದ ಕಣವು ಗಾಳಿ ಇಲ್ಲದ ಜಾಗದಲ್ಲಿ ಬಹಳ ದಿನಗಳವರೆಗೆ ಇರಬಲ್ಲದು. ಹೀಗಾಗಿ ಗಾಳಿ ಸೌಕರ್ಯ ಸೂಕ್ತವಿಲ್ಲದ ಕೋಣೆಗಳಲ್ಲಿ ದೀರ್ಘಕಾಲದವರೆಗೆ ಇಂತಹ ಕಣಗಳು ಇರುತ್ತವೆ ಅಂತಾ ಪ್ರಾಧ್ಯಾಪಕ ಲೀ ಹೇಳಿದ್ದಾರೆ.
2020ರಲ್ಲಿ ಲಾಕ್ಡೌನ್ ಸಂದರ್ಭದಲ್ಲಿ ಎಲ್ಲಾ ವಿಶ್ವವಿದ್ಯಾಲಯಗಳು ಬಂದ್ ಆಗಿದ್ದ ವೇಳೆಯಲ್ಲಿ ಈ ಅಧ್ಯಯನವನ್ನ ನಡೆಸಲಾಯ್ತು. ಈ ಸಂದರ್ಭದಲ್ಲಿ ಜನತೆ ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ವೈಯಕ್ತಿಕ ರಕ್ಷಣಾ ಸಾಧನಗಳ ಕೊರತೆಯನ್ನ ಅನುಭವಿಸುತ್ತಿದ್ದರು. ಹೀಗಾಗಿ ಅನೇಕರು ಮನೆಯಲ್ಲಿಯೇ ಮಾಸ್ಕ್ ತಯಾರು ಮಾಡೋಕೆ ಶುರು ಮಾಡಿದ್ರು. ಇದನ್ನ ಗಮನಿಸಿದ ಜಾರ್ಜಿಯಾ ಇನ್ಸ್ಟಿಟ್ಯೂಟ್ ಇಂತಹದ್ದೊಂದು ಅಧ್ಯಯನ ನಡೆಸಿತು.
ಕಳೆದ ಏಪ್ರಿಲ್ ತಿಂಗಳಲ್ಲಿ ಮನೆಯಲ್ಲಿ ತಯಾರಿಸಿದ ಫೇಸ್ ಮಾಸ್ಕ್ಗಳನ್ನ ಅಧ್ಯಯನದಲ್ಲಿ ಬಳಸಲಾಯ್ತು. ಇದರಲ್ಲಿ ಪಾಲಿಸ್ಟರ್ನಿಂದ ಮಾಡಿದ ಏಕ ಪದರದ ಬಟ್ಟೆ, ನಾನ್ವೊವೆನ್ ಬಟ್ಟೆ, ಸೆಲ್ಯೂಲೋಸ್ ಬಟ್ಟೆ , ಆಸ್ಪತ್ರೆಗಳಲ್ಲಿ ಕಂಡು ಬರುವ ಬಟ್ಟೆ ಸೇರಿದಂತೆ ವಿವಿಧ ಬಟ್ಟೆಗಳಿಂದ ತಯಾರಾದ ಮಾಸ್ಕ್ಗಳನ್ನ ಬಳಕೆ ಮಾಡಲಾಯ್ತು.
ಈ ಅಧ್ಯಯನದಲ್ಲಿ ಏಕ ಪದರದ ಮಾಸ್ಕ್ಗಿಂತ ಬಹುಪದರಗಳ ಮಾಸ್ಕ್ಗಳು ಹೆಚ್ಚು ಪರಿಣಾಮಕಾರತ್ವವವನ್ನ ತೋರಿಸಿವೆ. ಎರಡು ಹಾಗೂ ಮೂರು ಪದರವುಳ್ಳ ಮಾಸ್ಕ್ಗಳು 50 ಪ್ರತಿಶತ ಪರಿಣಾಮಕಾರತ್ವವನ್ನ ತೋರಿಸುತ್ತವೆ. ಇದು ಮಾತ್ರವಲ್ಲದೇ ಮಾಸ್ಕ್ ಎಷ್ಟು ಫಿಟ್ ಆಗಿದೆ ಅನ್ನೋದು ಮುಖ್ಯವಾಗುತ್ತೆ. ಏಕಂದರೆ ಮಾಸ್ಕ್ಗಳು ಸಡಿಲವಾಗಿದ್ದರೆ ಸೂಕ್ಷ್ಮವಸ್ತುಗಳು ಸುಲಭವಾಗಿ ಹರಿದಾಡುತ್ತದೆ. ಎರಡು ಪದರಗಳುಳ್ಳ ಫಿಟ್ ಆಗಿರುವ ಮಾಸ್ಕ್ಗಳು 84 ಪ್ರತಿಶತ ಸೂಕ್ಷ್ಮ ವಸ್ತುಗಳನ್ನ ತಡೆಹಿಡಿಯುವ ಸಾಮರ್ಥ್ಯ ಹೊಂದಿವೆ ಎಂದು ಅಧ್ಯಯನ ಹೇಳಿದೆ.