ತೀವ್ರ ಪರಿಣಾಮ ಬೀರದ ಲಘು ಕೊರೋನಾ ಸೋಂಕು ಮತ್ತು ಲಕ್ಷಣರಹಿತರಲ್ಲೂ ಮೂರ್ನಾಲ್ಕು ತಿಂಗಳ ನಂತರ ಟಿ ಸೆಲ್ ಹಾಗೂ ಪ್ರತಿಕಾಯ ಕಾಣಿಸಿಕೊಂಡಿದ್ದು, ವೈರಾಣುವಿನ ವಿರುದ್ಧ ನಿರೋಧಕ ಶಕ್ತಿ ಹೆಚ್ಚಿಸಿರುವುದು ಪತ್ತೆಯಾಗಿದೆ.
ಲಘು ಮತ್ತು ಲಕ್ಷಣರಹಿತ ಸೋಂಕಿನ ಕುರಿತು ನಡೆದ ಅಧ್ಯಯನದ ವೇಳೆ ಈ ಸಂಗತಿ ಬೆಳಕಿಗೆ ಬಂದಿದ್ದು, ಇದೊಂದು ಉತ್ತಮ ಬೆಳವಣಿಗೆ ಎಂದು ವಿಜ್ಞಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಲಂಡನ್ ನ ಕ್ವೀನ್ ಮೇರಿ ವಿಶ್ವವಿದ್ಯಾಲಯದ ಜೋಸೆಫ್ ಗಿಬ್ಬನ್ ಅವರು ಈ ಕುರಿತು ಖುಷಿ ಹಂಚಿಕೊಂಡಿದ್ದು, ಸೋಂಕಿತ ಆರೋಗ್ಯ ಕಾರ್ಯಕರ್ತರನ್ನು 16-18 ವಾರಗಳ ನಂತರ ಸಂಶೋಧನೆಗೆ ಒಳಪಡಿಸಲಾಗಿತ್ತು. ಈ ಪೈಕಿ ಶೇ.89 ರಷ್ಟು ಮಂದಿಯಲ್ಲಿ ಪ್ರತಿಕಾಯ ಪತ್ತೆಯಾಗಿದೆ. ಅಲ್ಲದೆ, ಬಿಳಿ ರಕ್ತಕಣಗಳು ವೃದ್ಧಿಯಾಗಿವೆ. ಲಸಿಕೆಯು ಶಾಶ್ವತ ಪರಿಣಾಮ ಬೀರಬಲ್ಲದು ಎಂಬುದೂ ನಿರೂಪಿತವಾಗಿದೆ ಎಂದಿದ್ದಾರೆ.