ಸ್ಟ್ರಿಪ್ ಬಾರ್ ಅಂದಾಕ್ಷಣ ನಿಮಗೆ ತರಹೇವಾರಿ ಮದ್ಯಪಾನ, ಲಲನೆಯರ ನೃತ್ಯ, ಕಿವಿಗಡಕ್ಕಿಚ್ಚುವ ಸಂಗೀತ ಹಾಗೂ ರಂಗ್ಭಿರಂಗಿ ಲೈಟ್ಗಳು ನಿಮ್ಮ ಕಣ್ಮುಂದೆ ಬರಬಹುದು. ಆದರೆ ಕೊರೊನಾ ಜಗತ್ತನ್ನ ಎಷ್ಟರ ಮಟ್ಟಿಗೆ ಬದಲಾಯಿಸಿದೆ ಎಂದರೆ ಮೋಜು ಮಸ್ತಿಯ ತಾಣ ಕೂಡ ಕೊರೊನಾ ಲಸಿಕಾ ಕೇಂದ್ರವಾಗಿ ಬದಲಾಗಿದೆ.
ಲ್ಯಾರಿ ಫ್ಲೈಂಟ್ಸ್ ಹಸಲ್ ಕ್ಲಬ್ ಶುಕ್ರವಾರ ಇಂತಹದ್ದೊಂದು ವಿನೂತನ ಪ್ರಯತ್ನವನ್ನ ಮಾಡಿದೆ. ನಿತ್ಯದ ಉದ್ಯಮ ಆರಂಭಿಸುವ ಮುನ್ನ ಕ್ಲಬ್ನಲ್ಲಿ 100ಕ್ಕೂ ಹೆಚ್ಚು ಮಂದಿಗೆ ಕೊರೊನಾ ಲಸಿಕೆ ನೀಡಲಾಯ್ತು. ಬಿಕನಿ ಧರಿಸಿದ್ದ ನೃತ್ಯಗಾರ್ತಿಯರೂ ಸಹ ಅದೇ ಧಿರಿಸಿನಲ್ಲೇ ಬಂದು ಲಸಿಕೆ ಪಡೆದಿದ್ದು ವಿಶೇಷವಾಗಿತ್ತು.
ಇದು ಮಾತ್ರವಲ್ಲದೇ ಕೊರೊನಾ ಲಸಿಕೆ ಪಡೆದ ಪ್ರಮಾಣ ಪತ್ರವನ್ನ ತೋರಿಸಿದವರಿಗೆ ಕ್ಲಬ್ ಕೆಲ ವಿಶೇಷ ಆಫರ್ಗಳನ್ನೂ ನೀಡಿದೆ. ಕ್ಲಬ್ನ ಸದಸ್ಯತ್ವ ಪ್ರಮಾಣ ಪತ್ರ, ಲಸಿಕೆ ಪಡೆದವರ ಐವರು ಸದಸ್ಯರಿಗೆ ಉಚಿತ ಎಂಟ್ರಿ ಹಾಗೂ ಒಂದು ಬಾಟಲ್ ಉಚಿತ ಮದ್ಯ ಮತ್ತು ಲಸಿಕೆ ಪಡೆದ ನೃತ್ಯಗಾರ್ತಿಯರಿಂದ ಮನರಂಜನೆ..!
ಈ ರೀತಿ ಕ್ಲಬ್ನಲ್ಲಿ ಲಸಿಕೆ ನೀಡೋದು ಸಹ ಅಮೆರಿಕ ಸರ್ಕಾರದ ಯೋಜನೆಯೇ ಆಗಿದೆ. ಜನರಿಗೆ ಲಸಿಕೆ ಪಡೆಯಲು ಸ್ಪೂರ್ತಿ ನೀಡುವ ಸಲುಗಾಗಿ ಈ ವಿನೂತನ ಪ್ರಯತ್ನ ಮಾಡಲಾಗಿದೆ.