alex Certify ಕ್ರಿಸ್ಮಸ್‌ ಗಿಫ್ಟ್‌ ಆಗಿ ತಿಂಗಳ ಬಾಡಿಗೆಯಲ್ಲಿ 50% ಕಟ್….!‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಸ್ಮಸ್‌ ಗಿಫ್ಟ್‌ ಆಗಿ ತಿಂಗಳ ಬಾಡಿಗೆಯಲ್ಲಿ 50% ಕಟ್….!‌

ಕೋವಿಡ್ ಲಾಕ್‌ಡೌನ್ ಕಾರಣದಿಂದಾಗಿ ಜಗತ್ತಿನಾದ್ಯಂತ ಶ್ರಮಿಕ ವರ್ಗದ ಜನತೆ ಹಾಗೂ ಉದ್ಯೋಗಸ್ಥರಿಗೆ ಭಾರೀ ಸಂಕಟದ ದಿನಗಳು ಎದುರಾಗಿವೆ. ಕೆಲವರಂತೂ ತಂತಮ್ಮ ಮನೆಗಳ ಬಾಡಿಗೆ ಕಟ್ಟಲು ದುಡ್ಡಿಲ್ಲದೇ ಪರದಾಡುತ್ತಿದ್ದಾರೆ.

ದೂರದ ಊರುಗಳಿಗೆ ಉದ್ಯೋಗ ಅರಸಿಕೊಂಡು ಹೋಗಿರುವ ಮಂದಿಗೆ ವೇತನದಲ್ಲಿ ಕಡಿತ ಅಥವಾ ಇನ್ನೂ ಕೆಟ್ಟ ಪರಿಸ್ಥಿತಿಯಲ್ಲಿ ಕೆಲಸ ಕಳೆದುಕೊಂಡಾಗ ಆಗುವ ಆರ್ಥಿಕ ಹೊರೆ ಅಷ್ಟಿಷ್ಟಲ್ಲ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಬಾಡಿಗೆದಾರರಿಗೆ ಮನೆಯ ಮಾಲೀಕರು ಕರುಣೆ ತೋರಿ ಬಾಡಿಗೆ ಕಡಿಮೆ ಮಾಡಿಕೊಂಡ ಅನೇಕ ನಿದರ್ಶನಗಳು ನಮ್ಮ ನಿಮ್ಮ ನಡುವೆ ಘಟಿಸುತ್ತಿವೆ.

ಇಂಥದ್ದೇ ಒಂದು ನಿದರ್ಶನದಲ್ಲಿ, ಕ್ರಿಸ್ಮಸ್‌ ಪ್ರಯುಕ್ತ ತನ್ನ ಮನೆಯಲ್ಲಿ ಬಾಡಿಗೆ ಇರುವ ಕುಟುಂಬಕ್ಕೆ ಮಾಲೀಕರೊಬ್ಬರು ಹಬ್ಬದ ಗ್ರೀಟಿಂಗ್ಸ್ ಕಳುಹಿಸಿ, ಜೊತೆಯಲ್ಲೊಂದು ನೋಟ್‌ ಅನ್ನು ಮನೆ ಬಾಗಿಲಿನಲ್ಲಿ ಇಟ್ಟಿದ್ದಾರೆ. ಆ ನೋಟ್‌ನಲ್ಲಿದ್ದ ವಿಚಾರ ನೋಡಿ ಬಾಡಿಗೆದಾರರು ಬಲೇ ಖುಷ್‌ ಆಗಿದ್ದಾರೆ.

“ಸೀಸನ್ಸ್ ಗ್ರೀಟಿಂಗ್ಸ್‌ ಹಾಗೂ ಹೊಸ ವರ್ಷದ ಶುಭಾಶಯಗಳು. ಕ್ರಿಸ್‌, ಈ ಬಾರಿ ನಿಮಗೆ ಸಾಂಟಾ ಕೊಡಬಲ್ಲ ಬೆಸ್ಟ್‌ ಗಿಫ್ಟ್ ಎಂದರೆ ಜನವರಿ ತಿಂಗಳ ಬಾಡಿಗೆಯನ್ನು ಅರ್ಧದಷ್ಟು ಕಡಿಮೆ ಮಾಡುವುದು. ಆದ್ದರಿಂದ, ಈ ತಿಂಗಳ ಅಂತ್ಯಕ್ಕೆ $440 ಪಾವತಿ ಮಾಡಿದರೆ ಸಾಕು” ಎಂದು ನೋಟ್‌ನಲ್ಲಿ ಬರೆಯಲಾಗಿದೆ.

ಇದೇ ಖುಷಿಯಲ್ಲಿ ಕ್ರಿಸ್‌ ತಮ್ಮ ರೆಡ್ಡಿಟ್ ಅಕೌಂಟ್‌ನಲ್ಲಿ ಈ ಸಮಾಚಾರ ಹಂಚಿಕೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...