ಕ್ಷೌರಿಕನ ಬಳಿ ಕೇವಲ ತಲೆಗೂದಲನ್ನ ಕತ್ತರಿಸಿಕೊಳ್ಳೋದಕ್ಕೆ ಮಾತ್ರ ಹೋಗಿದಿಲ್ಲ……ತರಹೇವಾರಿ ವಿಧದ ತಲೆಕೂದಲಿಗೆ ಬಳಸುವ ಉತ್ಪನ್ನಗಳು ಹಾಗೂ ತಲೆಗೂದಲಿನ ಆರೈಕೆ, ಸ್ಟೈಲ್ ಹೀಗೆ ನಾನಾ ಕಾರಣಕ್ಕೆ ಕ್ಷೌರಿಕನ ಬಳಿ ಹೋಗುತ್ತೇವೆ. ಪಾಕಿಸ್ತಾನದ ಕ್ಷೌರಿಕನೊಬ್ಬ ಬೆಂಕಿ, ಮಚ್ಚು, ಸುತ್ತಿಗೆ, ಗಾಜುಗಳನ್ನೆಲ್ಲ ಬಳಸಿ ಹೇರ್ ಸ್ಟೈಲ್ ಮಾಡಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಲಾಹೋರ್ ಮೂಲದ ಅಲಿ ಅಬ್ಬಾಸ್ ಈ ವಿಚಿತ್ರ ವಿಧಾನಗಳನ್ನ ಬಳಸಿ ಗ್ರಾಹಕರ ಕೂದಲನ್ನ ಕತ್ತರಿಸಿದ್ದಾರೆ. ಸರಿಯಾದ ತರಬೇತಿಯನ್ನ ಪಡೆದ ಬಳಿಕವೇ ಅಬ್ಬಾಸ್ ಈ ರೀತಿಯ ಕೇಶ ವಿನ್ಯಾಸವನ್ನ ಮಾಡ್ತಿದ್ದಾರೆ.
ಪ್ರತಿ ದಿನ ನಾನು ಕೇಶ ವಿನ್ಯಾಸ ಮಾಡೋಕೆ ಹೊಸ ಮಾರ್ಗಗಳನ್ನ ಹುಡುಕುತ್ತೇನೆ. ನಾನು ಸುತ್ತಿಗೆ ಇಲ್ಲವೇ ಚಾಕು ಹಿಡಿದುಕೊಂಡು ಕೇಶ ವಿನ್ಯಾಸ ಮಾಡೋದು ಅಂದರೆ ನನಗೆ ಅದು ಒಂದು ಪ್ರಯೋಗ ಇದ್ದಂತೆ. ಈ ರೀತಿ ಕೇಶ ವಿನ್ಯಾಸ ಮಾಡೋದನ್ನ ಕಲಿಯೋಕೆ ನಾನು ವರ್ಷಾನುಗಟ್ಟಲೇ ಶ್ರಮ ಪಟ್ಟಿದ್ದೇನೆ ಎಂದು ಅಬ್ಬಾಸ್ ಹೇಳಿದ್ದಾರೆ.