ವಂದೇ ಭಾರತ್ ಮಿಷನ್ ಅಡಿಯಲ್ಲಿ ದೆಹಲಿಯಿಂದ ಚೀನಾದ ವುಹಾನ್ಗೆ ಹಾರಿದ 19 ಮಂದಿ ಭಾರತೀಯರಿಗೆ ಕೊರೊನಾ ದೃಢಪಟ್ಟಿದೆ ಎಂಬ ಚೀನಾದ ವರದಿಗೆ ಏರ್ ಇಂಡಿಯಾ ಪ್ರತಿಕ್ರಿಯೆ ನೀಡಿದೆ.
ಏರ್ ಇಂಡಿಯಾ ಕೊರೊನಾ ಸಂಬಂಧಿ ಮಾರ್ಗಸೂಚಿಗಳನ್ನ ಕಟ್ಟುನಿಟ್ಟಾಗಿ ಪಾಲಿಸುತ್ತಿದೆ. ವುಹಾನ್ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಪ್ರಮಾಣೀಕೃತ ಲ್ಯಾಬ್ಗಳಿಂದ ನೆಗೆಟಿವ್ ವರದಿ ಹೊಂದಿದ್ದರು ಅಂತಾ ಸ್ಪಷ್ಟನೆ ನೀಡಿದೆ.
ಭಾರತೀಯ ಪ್ರಯಾಣಿಕರು ಪ್ರಮಾಣೀಕೃತ ಲ್ಯಾಬ್ನಿಂದ ಕೊರೊನಾ ನೆಗೆಟಿವ್ ವರದಿ ಪಡೆದುಕೊಂಡೇ ದೆಹಲಿಯಿಂದ ವಿಮಾನ ಹತ್ತಿದ್ದಾರೆ. ಕೋವಿಡ್ 19 ನೆಗೆಟಿವ್ ವರದಿ ಇಲ್ಲದೇ ಏರ್ ಇಂಡಿಯಾದ ಯಾವುದೇ ವಿಮಾನವನ್ನ ಹತ್ತುವ ಮಾತೇ ಇಲ್ಲ. ಭಾರತೀಯ ಪ್ರಯಾಣಿಕರು ವಿಮಾನ ಹತ್ತುವ ಮುನ್ನ 2 ಬಾರಿ ಕೋವಿಡ್ ಪರೀಕ್ಷೆಗೆ ಒಳಗಾಗಿರುತ್ತಾರೆ ಅಂತಾ ಏರ್ ಇಂಡಿಯಾ ತಿಳಿಸಿದೆ.
ಏರ್ ಇಂಡಿಯಾ ಮೇಲೆ ಇಂತಹ ಆರೋಪ ಇದೇ ಮೊದಲೇನಲ್ಲ. ಏರ್ ಇಂಡಿಯಾದಲ್ಲಿದ್ದ ಪ್ರಯಾಣಿಕರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ ದುಬೈ ಹಾಗೂ ಹಾಕಾಂಗ್ ಏರ್ ಇಂಡಿಯಾ ಪ್ರವೇಶಕ್ಕೆ ನಿರ್ಬಂಧ ಹೇರಿತ್ತು.