ಕೊರೊನಾ ಲಸಿಕೆ ಅಭಿಯಾನ ದೇಶದಲ್ಲಿ ನಡೆಯುತ್ತಿದೆ. ಆದ್ರೆ ದೇಶದ ಬಹುತೇಕ ಜನರಿಗೆ ಇನ್ನೂ ಕೊರೊನಾ ಲಸಿಕೆ ಸಿಕ್ಕಿಲ್ಲ. ಕೊರೊನಾ ಲಸಿಕೆ ಹಾಕಿಸಿಕೊಳ್ಳುವವರಲ್ಲಿ ಸಾಕಷ್ಟ ಭಯವಿದೆ. ಕೊರೊನಾ ಲಸಿಕೆ ಹಾಕಿದ ನಂತ್ರ ಏನು ಮಾಡಬೇಕು? ಏನು ಮಾಡಬಾರದು ಎಂಬ ಪ್ರಶ್ನೆ ಮೂಡುವುದು ಸಹಜ.
ಕೊರೊನಾ ಲಸಿಕೆ ಪಡೆದವರು, ಕೊರೊನಾ ಲಸಿಕೆ ಪಡೆದವರ ಜೊತೆಗಿದ್ದರೆ ಮಾಸ್ಕ್ ಧರಿಸುವ ಅಗತ್ಯವಿಲ್ಲ. ಆದ್ರೆ ಬೇರೆ ವ್ಯಕ್ತಿಗಳ ಜೊತೆ, ಸಾರ್ವಜನಿಕ ಪ್ರದೇಶದಲ್ಲಿ ಮಾಸ್ಕ್ ಧರಿಸಬೇಕಾಗುತ್ತದೆ. ಕೊರೊನಾ ಪಾಸಿಟಿವ್ ಬಂದ ವ್ಯಕ್ತಿ ಜೊತೆಗಿದ್ದರೆ ನೀವು ಕ್ವಾರಂಟೈನ್ ಆಗಬೇಕಿಲ್ಲ. ಆದ್ರೆ ಕೊರೊನಾ ಲಕ್ಷಣಗಳು ಕಂಡು ಬಂದಲ್ಲಿ ಕ್ವಾರಂಟೈನ್ ಆಗಬೇಕಾಗುತ್ತದೆ. ಕೊರೊನಾ ಪರೀಕ್ಷೆ ಮಾಡಿಸಬೇಕಾಗುತ್ತದೆ.
ಲಸಿಕೆ ಹಾಕಿದ ವ್ಯಕ್ತಿಗೆ ಸಾರ್ವಜನಿಕ ಪ್ರದೇಶ, ರೆಸ್ಟೋರೆಂಟ್ ಗಳಲ್ಲಿ ಸೋಂಕು ಹರಡುವ ಸಾಧ್ಯತೆ ಕಡಿಮೆ. ಆದ್ರೆ ಲಸಿಕೆ ಹಾಕಲಾಗಿದೆ ಎಂದು ನಿರ್ಲಕ್ಷ್ಯ ಸಲ್ಲದು. ಸಾರ್ವಜನಿಕ ಪ್ರದೇಶದಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಲಸಿಕೆ ಹಾಕಿದ ನಂತ್ರವೂ ಪ್ರವಾಸ ಮಾಡುವುದು ಅಪಾಯಕಾರಿ. ಸಣ್ಣ ಪ್ರವಾಸ ಕೈಗೊಳ್ಳಬಹುದು. ಆದ್ರೆ ವಿದೇಶಿ ಪ್ರವಾಸ ಒಳ್ಳೆಯದಲ್ಲ. ಜೊತೆಗೆ ಲಸಿಕೆ ಹಾಕಿದ್ದರೂ ಸಾರ್ವಜನಿಕ ಸಮಾರಂಭಗಳಿಂದ ಹೊರಗಿರುವುದು ಒಳ್ಳೆಯದು. ಎಲ್ಲ ಪ್ರದೇಶಗಳಲ್ಲಿ ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಜರ್ ಬಳಕೆ ಮುಂದುವರಿಸಬೇಕು.
ಕೊರೊನಾ ಲಸಿಕೆ ನಿಮ್ಮನ್ನು ಸಂಪೂರ್ಣವಾಗಿ ರಕ್ಷಿಸಬಲ್ಲದೆ ಎಂಬ ಪ್ರಶ್ನೆಗೆ ಇನ್ನೂ ಸರಿಯಾದ ಉತ್ತರ ಸಿಕ್ಕಿಲ್ಲ. ಲಸಿಕೆ ಕೆಲವರಲ್ಲಿ ಅಡ್ಡ ಪರಿಣಾಮ ಬೀರಿದ್ದ ಕಾರಣ ಇದ್ರ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಯುತ್ತಿದೆ. ಪರೀಕ್ಷೆ ಪೂರ್ಣಗೊಂಡ ನಂತ್ರ ಸರಿಯಾದ ಉತ್ತರ ಸಿಗಬೇಕಿದೆ.