alex Certify ಮಕ್ಕಳ ಜನ್ಮದಿನಕ್ಕೆ ಬರೋಬ್ಬರಿ 70 ಲಕ್ಷ ರೂ. ಖರ್ಚು ಮಾಡಿದ ದಂಪತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳ ಜನ್ಮದಿನಕ್ಕೆ ಬರೋಬ್ಬರಿ 70 ಲಕ್ಷ ರೂ. ಖರ್ಚು ಮಾಡಿದ ದಂಪತಿ…!

ಬ್ರಿಟನ್​​ನ ಬಹುದೊಡ್ಡ ಕುಟುಂಬ ಎಂಬ ಖ್ಯಾತಿಗೆ ಪಾತ್ರರಾಗಿರುವ ಸ್ಯೂ ರಾಡ್​​ಫೋರ್ಡ್​ ಹಾಗೂ ಆಕೆಯ ಪತಿ ನ್ಯೋಲ್​ ರಾಡ್​ಫೋರ್ಡ್​ 22ಕ್ಕೂ ಹೆಚ್ಚು ಮಕ್ಕಳನ್ನ ಹೊಂದಿದ್ದಾರೆ. ಮನೆ ತುಂಬಾ ಮಕ್ಕಳನ್ನ ಹೊಂದಿರುವ ಈ ಕುಟುಂಬವು ಸದಾ ಗಿಜಿಗುಡುತ್ತಲೇ ಇರುತ್ತದೆ.

ಈ ದಂಪತಿಯು ಬೇಕರಿಯನ್ನ ನಡೆಸಿಕೊಂಡು ಜೀವನ ಸಾಗಿಸುತ್ತಿದೆ. ನೀವು ನಂಬುತ್ತೀರೋ ಇಲ್ಲವೋ ಸ್ಯೂ ತನ್ನ ಜೀವನದ 800 ವಾರಗಳನ್ನ ಗರ್ಭಿಣಿಯಾಗಿ ಕಳೆದಿದ್ದಾಳೆ.

ಕ್ರಿಸ್​, ಸೋಫಿ, ಚ್ಲೋ, ಜಾಕ್​, ಡೇನಿಯಲ್, ಲ್ಯೂಕ್​, ಮಿಲ್ಲೆ, ಕೇಟಿ, ಕೇಮ್ಸ್, ಎಲ್ಲೆ, ಏಮಿ, ಜೋಶ್​, ಮ್ಯಾಕ್ಸ್, ಆಸ್ಕರ್​, ಕಾಸ್ಪರ್​, ಹ್ಯಾಲೆ, ಫೋಬೆ ಹಾಗೂ ಆರ್ಕೆ ಇವರ ಮಕ್ಕಳ ಹೆಸರಾಗಿದೆ. ಕಳೆದ ವರ್ಷದ ಸೆಪ್ಟೆಂಬರ್​ ತಿಂಗಳಿನಲ್ಲಿ ಈ ದಂಪತಿ ಹೆಣ್ಣು ಮಗುವನ್ನ ಮನೆಗೆ ಬರಮಾಡಿಕೊಂಡಿದೆ.

ಮನೆಯ ಹೊಸ ಸದಸ್ಯೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮುನ್ನ ಈ ಕುಟುಂಬದ ಬಗ್ಗೆ ಹೆಚ್ಚೇನು ಮಾಹಿತಿ ತಿಳಿದಿರಲಿಲ್ಲ. ಆದರೆ ಈಗ ಈ ಫ್ಯಾಮಿಲಿಯ ಬಗ್ಗೆ ಒಂದು ಕಾರ್ಯಕ್ರಮವೇ ಪ್ರದರ್ಶಿತವಾಗಿದೆ.

ಚಾನೆಲ್​ 5ನ ಹೊಸ ಶೋ ಒಂದರಲ್ಲಿ ರಾಡ್​ಫೋರ್ಡ್ಸ್​ ತಮ್ಮ ದೈನಂದಿನ ಖರ್ಚನ್ನ ಹೇಗೆ ನಿಭಾಯಿಸ್ತಾರೆ ಹಾಗೂ ಲಾಕ್​ಡೌನ್​ ಸಂದರ್ಭದಲ್ಲಿ ಈ ಕುಟುಂಬ ಜೀವನ ನಿರ್ವಹಣೆಗೆ ಎಷ್ಟು ಕಷ್ಟಪಟ್ಟಿದೆ ಅನ್ನೋದರ ಬಗ್ಗೆ ವಿವರಣೆ ನೀಡಿದೆ.

22 ಮಕ್ಕಳಿಗೆ ಹೊಟ್ಟೆ ತುಂಬಿಸೋದು ಅಂದರೆ ಸುಲಭದ ಮಾತಂತೂ ಅಲ್ಲವೇ ಅಲ್ಲ. ಈ ಕುಟುಂಬವು ದಿನಕ್ಕೆ 7.5 ಲೀಟರ್ ಹಾಲನ್ನ ಬಳಕೆ ಮಾಡುತ್ತದೆ. ಇವರ ಮನೆಯಲ್ಲಿ ದಿನಕ್ಕೆ 34 ಟಾಯ್ಲೆಟ್​ ಪೇಪರ್​ಗಳು ಖಾಲಿಯಾಗುತ್ತವೆಯಂತೆ.

ಇದು ಮಾತ್ರವಲ್ಲದೇ ಕೇವಲ ಹುಟ್ಟುಹಬ್ಬದ ಉಡುಗೊರೆಯೆಂದೇ ಈ ದಂಪತಿ ಈವರೆಗೆ 70 ಲಕ್ಷ ರೂಪಾಯಿ ಖರ್ಚು ಮಾಡಿದೆಯಂತೆ. ಇನ್ನು ಈ ವಿಚಾರವಾಗಿ ಮಾತನಾಡಿ ಸ್ಯೂ, ನಮ್ಮ ಮನೆಯಲ್ಲಿ ವರ್ಷಪೂರ್ತಿ ಬರ್ತಡೇ ಆಚರಣೆ ನಡೆಯುತ್ತಲೇ ಇರುತ್ತೆ. ಆದರೆ ನಾವೆಂದೂ ಮಕ್ಕಳ ದಿನವನ್ನ ವಿಶೇಷವಾಗಿಯೇ ಆಚರಿಸಿದ್ದೇವೆ ಎಂದು ಹೇಳಿದ್ದಾರೆ.

https://www.facebook.com/watch/?v=474329740419070&t=0

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...